

-
ಕಲಬುರಗಿ, : ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಅಥವಾ ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸಬೇಕೆಂಬುದು ಬಹಳ ದಿನದಿಂದ ಇಲ್ಲಿನ ಜನರ ಕೂಗಿದೆ. ಈ ನಿಟ್ಟಿನಲ್ಲಿ ಪ್ರದೇಶದ ಚುನಾಯಿತ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಶುಕ್ರವಾರ ಇಲ್ಲಿನ ಡಿ.ಸಿ. ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಯಚೂರು ಜಿಲ್ಲೆ ನೀತಿ ಆಯೋಗದ ಮಹತ್ವಾಕಾಂಕ್ಷೆ ಜಿಲ್ಲೆಯಲ್ಲಿ ಒಂದಾಗಿದೆ. ಕಲಬುರಗಿಯಲ್ಲಿನ ಇ.ಎಸ್.ಐ.ಸಿ. ಆಸ್ಪತ್ರೆ, ರಾಯಚೂರಿನ ಓಪೆಕ್ಸ್ ಆಸ್ಪತ್ರೆ ಕಟ್ಟಡದಜಿತೆ ಸಕಲ ಮೂಲಸೌಕರ್ಯವಿದ್ದು, ಇದನ್ನೇ ಏಮ್ಸ್ ಗೆ ಮೇಲ್ದರ್ಜೇಗೇರಿಸಬಹುದು. ಈ ಭಾಗದ ಒಳಿತಿಗೆ ಮತ್ತು ಪ್ರಗತಿಗೆ ಸಂಸದರು ಮುಂದಾಗಬೇಕು ಎಂದರು.
ಕೆ.ಕೆ.ಆರ್.ಡಿ.ಬಿ. ಮಂಡಳಿ ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ:
ಕೆ.ಕೆ.ಅರ್.ಡಿ.ಬಿ. ಮಂಡಳಿಗೆ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಅವರನ್ನು ನೇಮಿಸಿದಲ್ಲದೆ, ಇತರೆ 10 ಜನ ಜನಪ್ರತಿನಿಧಿಗಳನ್ನು ನೇಮಿಸಿ ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ತಂದಿರುವುದು ಸಂತಸವಾಗಿದೆ. ಡಾ.ಅಜಯ್ ಸಿಂಗ್ ಅವರು, ಮಂಡಳಿ ಮತ್ತು ಪ್ರದೇಶದವನ್ನು ಅಭಿವೃದ್ದಿಯತ್ತ ಮುನ್ನೆಡೆಸಲು ಸಮರ್ಥರಿದ್ದಾರೆ. ಇತ್ತೀಚೆಗೆ ಯೋಜನಾ ಸಚಿವ ಡಿ.ಸುಧಾಕರ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಿಂದಿನ ಸರ್ಕಾರ ಮಂಡಳಿಯ ವಿವೇಚನೆಗೆ ಶೇ.26 ರಷ್ಟು ಅನುದಾನ ನೀಡುತ್ತಿತ್ತು. ಅದನ್ನು ನಮ್ಮ ಸರ್ಕಾರ ಶೇ.96ಕ್ಕೆ ಹೆಚ್ಚಿಸಿದೆ. ಈ ಮೂಲಕ ಮಂಡಳಿ ಬಲವರ್ಧನೆಯೂ ಮಾಡಲಾಗಿದೆ ಎಂದರು.
: