ಏಣಿಯಿಂದ ಇಳಿಸಿ ಮಕ್ಕಳನ್ನು ರಕ್ಷಿಸಿದ ಪಾಲಕರು

SETUVE
Published on

ಯಾದಗಿರಿ: ಸತತ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಶಹಾಪುರ ತಾಲೂಕಿನ ಕೊಳ್ಳುರು (ಎಂ)- ಮರಕಲ್​ ಮಧ್ಯೆ ಪ್ರಗತಿಯಲ್ಲಿರುವ ಹಳ್ಳದ ಸೇತುವೆ ಮೇಲಿಂದ ಶಾಲಾ ಮಕ್ಕಳನ್ನು ಪಾಲಕರು ರಕ್ಷಣೆ ಮಾಡಿದ ಪ್ರಸಂಗ ಸೋಮವಾರ ನಡೆದಿದೆ.

ಕೊಳ್ಳುರು (ಎಂ)- ಮರಕಲ್​ ಮಧ್ಯದಲ್ಲಿನ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಎರಡೂ ಗ್ರಾಮಕ್ಕೆ ಸಂಚರಿಸಲು ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿತ್ತು. ಆದರೆ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ರಸ್ತೆ ಕೊಚ್ಚಿ ಹೋಗಿದೆ.

ಮರಕಲ್​ ಗ್ರಾಮದ ವಿದ್ಯಾರ್ಥಿಗಳು ಈ ರಸ್ತೆಯ ಮೂಲಕವೇ ದೇವದುರ್ಗ ತಾಲೂಕಿನ ಹೂವಿನಡಗಿ ಗ್ರಾಮದ ಖಾಸಗಿ ಶಾಲೆಗೆ ಹೋಗಿ ಬರುತ್ತಿದ್ದರು. ಆದರೆ ಸೋಮವಾರ ಸಂಜೆ ರಸ್ತೆ ಜಲಾವೃತಗೊಂಡಿದ್ದರಿಂದ ಮಕ್ಕಳು ತಮ್ಮೂರಿಗೆ ಬರಲು ಪರದಾಡುವಂತಾಯಿತು. ವಿಷಯ ತಿಳಿದ ಪಾಲಕರು ಗ್ರಾಮದಿಂದ ಏಣಿ ತಂದು ನಿರ್ಮಾಣ ಹಂತದ ಸೇತುವೆ ಮೇಲಿಂದ ಮಕ್ಕಳನ್ನು ಸುರಕ್ಷಿತವಾಗಿ ಕೆಳಗಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net