

ಚಿಕ್ಕಮಗಳೂರು: ಡಾ. ಗಿರೀಶ್ ಮೂಗ್ತಿಹಳ್ಳಿ ಅವರ ಕೃತಿ ಏಡಿ ಶಿಕಾರಿ ಮೂರನೇ ಮುದ್ರಣ ಕಂಡ ಸಂದರ್ಭದಲ್ಲಿ ಅವರನ್ನು ಚಿಕ್ಕಮಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾವಿನಕೆರೆ ದಯಾನಂದ್ ಇವರ ನೇತೃತ್ವದಲ್ಲಿ ಅಭಿನಂದಿಸಲಾಯಿತು.
ಅಭಿನAದನಾ ಭಾಷಣ ಮಾಡಿದ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರವೀಶ್ ಕ್ಯಾತನಬೀಡು, ನಮ್ಮೊಟ್ಟಿಗೆ ಬೆಳೆದ ಡಾ. ಗಿರೀಶ್ ಮೂಗ್ತಿಹಳ್ಳ ಅವರ ಏಡಿ ಶಿಕಾರಿ ಪುಸ್ತಕವು ಮೂರನೇ ಮುದ್ರಣ ಕಂಡಿದೆ. ಈ ಕಾದಂಬರಿಯು ಮಲೆನಾಡಿನ ಜೀವನ ಶೈಲಿಯನ್ನು ಮತ್ತು ಗ್ರಾಮೀಣ ಸೊಗಡನ್ನು ಅಚ್ಚುಕಟ್ಟಾಗಿ ಚಿತ್ರಿಸಿದೆ. ಡಾ. ಗಿರೀಶ್ ಮೂಗ್ತಿಹಳ್ಳಿ ಅವರಿಗೆ ಮುಂದಿನ ದಿನಗಳಲ್ಲಿ ಭವ್ಯ ಭವಿಷ್ಯವಿದೆ ಎಂದು ಶುಭ ಹಾರೈಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ. ಗಿರೀಶ್ ಮೂಗ್ತಿಹಳ್ಳಿ, ನಾನು ಸುಮಾರು ೧೩ ಪುಸ್ತಕಗಳನ್ನು ಹೊರತಂದಿದ್ದು, ಇನ್ನೂ ಮರ‍್ನಾಲ್ಕು ಪುಸ್ತಕಗಳು ಸಧ್ಯದಲ್ಲೇ ಹೊರಬೀಳಲಿವೆ. ಎಲ್ಲಾ ಪುಸ್ತಕಗಳ ಪ್ರಕಟಣೆಗೆ ತಮ್ಮೆಲ್ಲರ ಸಹಕಾರ ಬೇಕು ಎಂದರು.
ಇದೇ ಸಂದರ್ಭದಲ್ಲಿ ಪಿಸಿಎಲ್‌ಡಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಕೆಸವಿನಮನೆ ಭೈರೇಗೌಡರು, ಅಜ್ಜಂಪುರ ಜಿ. ಸೂರಿ ಪ್ರತಿಷ್ಠಾನದ ಅಧ್ಯಕ್ಷರಾದ ಸೂರಿ ಪ್ರಭು, ಪಟೇಲ್ ವೆಂಕಟೇಗೌಡರು, ಕನ್ನಡ ಸಾಹಿತ್ಯ ಪರಿಷತ್ ನಗರಾಧ್ಯಕ್ಷ ಸಚಿನ್ ಸಿಂಗ್, ತಾಲೂಕು ಗೌರವ ಕಾರ್ಯದರ್ಶಿ ಹಳೇಬೀಡು ಬಸವರಾಜ್ ಮತ್ತು ಟಿ. ಸಂದೀಪ್, ವಸ್ತಾರೆ ಹೋಬಳಿಯ ಡಾ. ಸತೀಶ್ ಜಕ್ಕನಹಳ್ಳಿ, ಉಪನ್ಯಾಸಕರಾದ ಡಾ. ಅಹಮದ್ ಶರೀಫ್, ಲಕ್ಯಾ ಹೋಬಳಿಯ ನವೀನ್, ವೆಂಕಟೇಶ್ ಉಪಸ್ಥಿತರಿದ್ದರು.