ಏಕೀಕರಣ ಹೋರಾಟಗಾರರಿಗೆ ಅಭಿನಂದನೆ

4ard01
Published on

ಔರಾದ್: ಕರ್ನಾಟಕ ಏಕೀಕರಣದಲ್ಲಿ ಹೋರಾಡಿದ ಪ್ರತಿ ವೀರ ಕನ್ನಡಿಗರಿಗೆ ಮನೆ ಮನೆಗಳಲ್ಲಿ ಕನ್ನಡ ಜ್ಯೋತಿ ಬೆಳಗಿಸಿ ಅಭಿನಂದನೆ ಸಲ್ಲಿಸುವುದು ಮತ್ತು ಕನ್ನಡ ಉಳಿವಿಗಾಗಿ ಕನ್ನಡಿಗರ ಕೊಡುಗೆ, ಪಾರಂಪರಿಕ ವೈಭವ ಪ್ರತಿಯೊಬ್ಬರು ಅರಿಯಬೇಕಾದದ್ದು ಅನಿವಾರ್ಯ ಎಂದು ಶಿಕ್ಷಕ ದತ್ತಾತ್ರಿ ಗಿರಿ ಹೇಳಿದರು.

ಔರಾದ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಶನಿವಾರ ಆಯೋಜಿಸಿದ್ದ ಕರ್ನಾಟಕ ನಾಮಕರಣ- ೫೦ರ ಸಂಭ್ರಮದ ಪ್ರಯುಕ್ತ ಕನ್ನಡದ ಕಂಪು ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಕಂಪು ದೇಶವಲ್ಲದೇ ವಿದೇಶಗಳಲ್ಲಿಯೂ ತನ್ನ ಕಂಪು ಬೀರಿ, ಘನತೆ ಎತ್ತಿ ಹಿಡಿದಿದೆ. ನಾವುಗಳು ಕನ್ನಡದ ನಾಡು ನುಡಿಗೆ ಹಗಲಿರುಳು ಶ್ರಮಿಸಿ, ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಡಾ ಶಾಲಿವಾನ ಉದಗಿರೆ ಮಾತನಾಡಿ, ಪ್ರತಿ ಕನ್ನಡಿಗರು ತಮ್ಮ ಮನೆಗಳಲ್ಲಿ ಕನ್ನಡ ಸಾಹಿತ್ಯ ಓದಲು ಪ್ರಾರಂಭಿಸಬೇಕು ಎಂದರು.

ಸಾಹಿತಿ ಮನ್ಮಥ ಡೋಳೆ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ ರಾಠೋಡ ಉದ್ಘಾಟಿಸಿದರು. ತಾಲೂಕು ಆಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಅಮೃತರಾವ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.

ಇಂದಿನಿಂದ ನಾವು ಕನ್ನಡ ಸಾಹಿತ್ಯ ಓದುವುದು, ಬೇರೆಯವರಿಗೆ ಓದಲು ತಿಳಿಸುತ್ತೇವೆ ಎಂದು ಮಕ್ಕಳಿಗೆ ಪ್ರಮಾಣ ವಚನ ಬೋಧಿಸಲಾಯಿತು.
ಪ್ರಮುಖರಾದ ಕಲ್ಪನಾ ಪಾಟೀಲ್, ವಿಶ್ವನಾಥ ಬಿರಾದಾರ, ಅನೀಲ ಕಟ್ಟೆ, ಬಿ.ಎಂ.ಸರ್, ರಾಜಕುಮಾರ ಡೊಂಗ್ರೆ, ಶಿವಕುಮಾರ ಪಾಟೀಲ್, ಗಾಯತ್ರಿ, ಸೈದಪ್ಪ, ಶಿವಕಾಂತ ಕೋಷ್ಠಿ , ಸಂಜೀವನರಾವ ಪಾಟೀಲ್ ಇತರರಿದ್ದರು. ಅಂಬದಾಸ ನೆಳಗೆ ಸ್ವಾಗತಿಸಿದರು. ಅಶೋಕ ಶೆಂಬೆಳ್ಳಿ ವಂದಿಸಿದರು. ವೆಂಕಟರಾವ ಸಲಗರ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net