ಏಕನಾಥೇಶ್ವರಿ ಹೊಸ ಮುಖಪದ್ಮ ಲೋಕಾರ್ಪಣೆ

Ekanatheshwaridevi
Published on

ಚಿತ್ರದುರ್ಗ: ದುರ್ಗದ ಅಧಿದೇವತೆ ಏಕನಾಥೇಶ್ವರಿ ಅಮ್ಮನ ಉತ್ಸವ ಮೂರ್ತಿಯ ಮುಖಪದ್ಮದ ಲೋಕಾರ್ಪಣೆ ಕಾರ್ಯಕ್ರಮವನ್ನು ಸೆ. 4ರಿಂದ 6ರವರೆಗೆ ಹಮ್ಮಿಕೊಳ್ಳಲಾಗಿದೆ.

ದೇವಿಯ ಹಳೆಯ ಮುಖಪದ್ಮಕ್ಕೆ ಬಂಗಾರದ ಲೇಪನ ನೀಡಿ ಹೊಸದಾಗಿ ಮುಖಪದ್ಮ ಸಿದ್ಧಗೊಂಡಿದ್ದು, 4ರಂದು ಬೆಳಗ್ಗೆ 8ಕ್ಕೆ ಕೋಟೆಯೊಳಗಿನ ದೇಗುಲದಿಂದ ಉತ್ಸವ ಮೂರ್ತಿ ಹೊರಟು ಜೋಗಿಮಟ್ಟಿಯ ಹಿಮವತ್ಕೇದಾರದಲ್ಲಿ ಗಂಗಾಪೂಜೆ ಜರುಗಲಿದೆ.

5ರಂದು ಬೆಳಗ್ಗೆ 8ಕ್ಕೆ ಮೇಲುದುರ್ಗದ ಸನ್ನಿಧಿಯಲ್ಲಿ ಕಲಾ ಹೋಮ, ಪ್ರಸಾದ ವಿತರಣೆ, ನಂತರ ದೇವಿಗೆ ಬಂಗಾರ ದೇಣಿಗೆಯಾಗಿ ನೀಡಿದ ಭಕ್ತರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 11ಕ್ಕೆ ದೇಗುಲದ ನೂತನ ಗೋಪುರವನ್ನು ಕೇಂದ್ರದ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಉದ್ಘಾಟಿಸುವರು. ಮಧ್ಯಾಹ್ನ 3ಕ್ಕೆ ದೇವಿಯ ಉಯ್ಯಲೋತ್ಸವಕ್ಕೆ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಚಾಲನೆ ನೀಡುವರು.

6ರಂದು ಬೆಳಗ್ಗೆ 10ಕ್ಕೆ ದೇವಿಯ ಪುಷ್ಪಾಲಂಕೃತ ಉತ್ಸವ ಮೂರ್ತಿಯ ಮೆರವಣಿಗೆ ಕೋಟೆ ಮಾರ್ಗದ ತಾಯಿಯ ಪಾದಗಟ್ಟೆಯಿಂದ ಆರಂಭವಾಗಲಿದೆ. ನಂತರ ರಾಜ ಬೀದಿಗಳಲ್ಲಿ ಸಂಚರಿಸಲಿದ್ದು, ಜಾನಪದ ಕಲಾತಂಡಗಳು ಭಾಗವಹಿಸಲಿವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಏಕನಾಥೇಶ್ವರಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಮೀನ್ದಾರ್ ದೊರೆಸ್ವಾಮಿ, ತಹಶೀಲ್ದಾರ್ ಡಾ.ನಾಗವೇಣಿ, ಆಡಳಿತಾಧಿಕಾರಿ ಎಚ್.ಕೆ.ಪ್ರಾಣೇಶ್ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net