ಏಕನಾಥೇಶ್ವರಿ ಪಾದಗುಡಿ ಮಹಾದ್ವಾರ ಲೋಕಾರ್ಪಣೆ

Ekanatheshri Devi Degula
Published on

ಚಿತ್ರದುರ್ಗ: ಏಕನಾಥೇಶ್ವರಿ ದೇವಿಯ ಜಾತ್ರಾ ಮಹೋತ್ಸವ ಬಯಲಿನ ಪಾದಗುಡಿ ಮುಂಭಾಗ 10 ಲಕ್ಷ ರೂ. ವೆಚ್ಚದಲ್ಲಿ ಸುಂದರವಾಗಿ ನಿರ್ಮಿಸಿರುವ ಮಹಾದ್ವಾರ ಶುಕ್ರವಾರ ಲೋಕಾರ್ಪಣೆಗೊಂಡಿತು.

ಇದಕ್ಕೆ ಸಹಕರಿಸಿದ ಕೋಮಲ ನರ್ಸಿಂಗ್ ಹೋಂನ ಡಾ.ಕೋಮಲಾ ವಿ. ಮರೆಗುದ್ದಿ ಅವರು ಮಹಾದ್ವಾರವನ್ನು ನೂರಾರು ಭಕ್ತರ ಸಮ್ಮುಖದಲ್ಲಿ ಉದ್ಘಾಟಿಸಿದರು. ಇದೇ ವೇಳೆ ಅವರನ್ನು ಸನ್ಮಾನಿಸಲಾಯಿತು.

ದುರ್ಗದ ರಕ್ಷಕಿಯಾದ ತಾಯಿಯೂ ಸರ್ವರಿಗೂ ಒಳಿತನ್ನು ಉಂಟು ಮಾಡಲಿ. ಈ ಬಾರಿಯೂ ಜಿಲ್ಲೆಯಲ್ಲಿ ಉತ್ತಮ ಮಳೆ-ಬೆಳೆಯಾಗಲಿ ಎಂದು ಪ್ರಾರ್ಥಿಸಿದ್ದೇನೆ. ಹರಕೆ ಈಡೇರಿದ್ದರಿಂದ ದಿ. ಶಾಂತಮ್ಮ, ಪಿ.ಎಚ್.ಚನ್ನವೀರಪ್ಪ, ಪಿ.ಸಿ.ವೀರಣ್ಣ ಪಟ್ಟಣಶೆಟ್ರು ಅವರ ಸ್ಮರಣಾರ್ಥ ಈ ಮಹಾದ್ವಾರ ನಿರ್ಮಿಸಲು ಸಹಕರಿಸಿದ್ದೇನೆ ಎಂದು ಕೋಮಲಾ ತಿಳಿಸಿದರು.

ಏಕನಾಥೇಶ್ವರಿ ದೇಗುಲ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದೊರೆಸ್ವಾಮಿ, ನಿರ್ದೇಶಕರಾದ ಬಿ.ರಾಮಜ್ಜ, ಎಸ್‌ಬಿಎಲ್ ಮಲ್ಲಿಕಾರ್ಜುನ್, ಶಾರದ ಬ್ರಾಸ್ ಬ್ಯಾಂಡ್‌ನ ಗುರುಮೂರ್ತಿ, ಕೆ.ಪಿ.ಶಿವಕುಮಾರ್, ತಾಲೂಕು ಕಚೇರಿಯ ಕಂದಾಯ ನಿರೀಕ್ಷಕ ಪ್ರಾಣೇಶ್, ಗ್ರಾಮ ಆಡಳಿತಾಧಿಕಾರಿ ಶ್ರೀನಿವಾಸ್, ಕೆಇಬಿ ಷಣ್ಮುಖಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net