ಏಕನಾಥೇಶ್ವರಿ ದೇವಿಗೆ ತ್ರಿಶೂಲಾಲಂಕಾರ

Ekanatheshwari
Published on

ಚಿತ್ರದುರ್ಗ: ದುರ್ಗದ ಅಧಿದೇವತೆ ಏಕನಾಥೇಶ್ವರಿ ಅಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಉತ್ಸವ ಮೂರ್ತಿಯನ್ನು ಮಾಳಪ್ಪನಹಟ್ಟಿ, ಮೆದೇಹಳ್ಳಿ ಗ್ರಾಮ, ಗೋಪಾಲಪುರ ರಸ್ತೆ ಹಾಗೂ ಇನ್ನಿತರೆ ಬಡಾವಣೆಗೆ ಕರೆತರಲಾಯಿತು. ಭಕ್ತರು ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸಿದರು.

ವಿವಿಧ ಬಗೆಯ ಪುಷ್ಪಗಳಿಂದ ದೇವಿಗೆ ತ್ರಿಶೂಲಾಲಂಕಾರ ಸೇವೆ ಜರುಗಿತು. ನಂತರ ಉತ್ಸವ ಮೂರ್ತಿಯನ್ನು ಇದೇ ಮೊದಲ ಬಾರಿ ಮಾಳಪ್ಪನಹಟ್ಟಿಗೆ ಕರೆತರಲಾಯಿತು. ಹೀಗಾಗಿ ಗ್ರಾಮದಲ್ಲಿ ಭಕ್ತೋತ್ಸಾಹ ಹೆಚ್ಚಿತ್ತು. ನೆರೆದಿದ್ದವರಿಗೆ ಪಾನಕ, ಕೋಸಂಬರಿ ವಿತರಿಸಲಾಯಿತು.

ಮೇ 3ರಂದು ದೇವಿಯ ಮೆರವಣಿಗೆ ಅಂಗವಾಗಿ ಪುಷ್ಪಾಲಂಕಾರ ಸೇವೆಯ ಜವಾಬ್ದಾರಿಯನ್ನು ಕರುವಿನ ಕಟ್ಟೆ, ಜೋಗಿಮಟ್ಟಿ ಗಂಗಾಂಬಿಕ ಬೆಸ್ತರ ಸಮುದಾಯದ ಭಕ್ತರು ವಹಿಸಿಕೊಂಡಿದ್ದಾರೆ. ಭಕ್ತರಿಂದ ಮೀಸಲು ಸಮರ್ಪಣೆ, ಮಹಾಮಂಗಳಾರತಿ ನೆರವೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net