ಏಕತೆಗಾಗಿ ಪ್ರಾಣ ತ್ಯಾಗ

ctd---0002
Published on

ಚಿತ್ರದುರ್ಗ: ಕಷ್ಟ ಕಾಲದಲ್ಲಿ ಪ್ರಧಾನಿಯಾಗಿ ದೇಶ ಮುನ್ನಡೆಸಿದ ಇಂದಿರಾಗಾಂಧಿ ದಿಟ್ಟ ಮಹಿಳೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ ಪೀರ್ ಹೇಳಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಇಂದಿರಾಗಾಂಧಿ ಅವರ ಜನ್ಮ ದಿನದ ಕಾರ‌್ಯಕ್ರಮದಲ್ಲಿ ಮಾತನಾಡಿ, ಬಡವರಿಗಾಗಿ ಅನೇಕ ಯೋಜನೆಗಳನ್ನು ಕೊಟ್ಟ ಇಂದಿರಾಗಾಂಧಿ ದೇಶದ ಏಕತೆಗಾಗಿ ಪ್ರಾಣ ತ್ಯಾಗ ಮಾಡಿದರು.

ಕಾಂಗ್ರೆಸ್ ಕುಟುಂಬ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಅಪ ಪ್ರಚಾರ ಮಾಡಿತು. ಮಹಿಳೆಯೂ ದೇಶ ಆಳಬಹುದು ಎನ್ನುವುದನ್ನು ವಿಶ್ವಕ್ಕೆ ತೋರಿಸಿಕೊಟ್ಟ ಕೀರ್ತಿ ಇಂದಿರಾಗಾಂಧಿ ಅವರಿಗೆ ಸಲ್ಲುತ್ತದೆ ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ‌್ಯದರ್ಶಿ ಡಿ.ಎನ್.ಮೈಲಾರಪ್ಪ, ಬಳ್ಳಾರಿ ಜಿಲ್ಲಾ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಮಾಂಜನೇಯಲು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುನಿರಾ ಎ.ಮಕಾಂದಾರ್, ಗ್ಯಾರಂಟಿ ಅನುಷ್ಠಾನಗಳ ಸಮಿತಿ ಜಿಲ್ಲಾಧ್ಯಕ್ಷ ಆರ್.ಶಿವಣ್ಣ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ ಮಾತನಾಡಿದರು.

ಎಸ್.ಎನ್.ರವಿಕುಮಾರ್, ಎನ್.ಡಿ.ಕುಮಾರ್, ಸೈಯದ್ ಖುದ್ದೂಸ್, ಭೂತೇಶ್, ಆರ್.ಪ್ರಕಾಶ್, ಪರ್ವಿನ್, ಭಾಗ್ಯಮ್ಮ, ಬಸಮ್ಮ, ನಾಗರಾಜ್ ಪೈಲೇಟ್, ಜಿ.ವಿ.ಮಧುಗೌಡ, ಎಚ್.ಶಬ್ಬೀರ್‌ಬಾಷಾ, ದೇವರಾಜ್, ಪರಮೇಶ್ವರಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net