

ಚಿಕ್ಕೋಡಿ: ತಾಲೂಕಿನ ಜೋಡಕುರಳಿ ಗ್ರಾಮದ ಸಿದ್ಧಾರೂಢ ಮಠದಲ್ಲಿ ಶಿವಭಜನಾ ಸಪ್ತಾಹ ಕಾರ್ಯಕ್ರಮ ಏ. ೬ರಿಂದ ೧೨ರವರೆಗೆ ನಡೆಯಲಿದೆ ಎಂದು ಚಿದ್ಘನಾನಂದ ಭಾರತಿ ಸ್ವಾಮೀಜಿ ಹೇಳಿದರು.
ಶ್ರೀಮಠದ ಸಭಾಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಏ. ೬ರಂದು ಬ್ರಾಹ್ಮಿ ಮುಹೂರ್ತದಲ್ಲಿ ಶಿವಭಜನಾ ಸಪ್ತಾಹ ಆರಂಭವಾಗಿ ಸತತ ೭ ದಿನಗಳ ಕಾಲ ಬೆಳಗ್ಗೆ ೬ ರಿಂದ ರಾತ್ರಿ ೯ರ ವರೆಗೆ ಶಿವನಾಮ ಸ್ಮರಣೆ ಭಜನಾ ಸಪ್ತಾಹ ನಡೆಯಲಿದೆ. ಏ. ೧೨ರಂದು ಸಂಜೆ ಶ್ರೀ ಸಿದ್ಧಾರೂಢ ಮಹಾರಾಜರ ರಥೋತ್ಸವ ಜರುಗುತ್ತದೆ. ಏ. ೧೩ರಂದು ಸಂಜೆ ಕೌದಿ ಪೂಜೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಗುತ್ತದೆ. ಪ್ರತಿ ದಿನ ಹತ್ತು ಸಾವಿರಕ್ಕೂ ಹೆಚ್ಚಿನ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.