ಏ.೩೦ ರಿಂದ ಜಾತ್ರಾ ಮಹೋತ್ಸವ

bkt-29-2
Published on

ಬಾಗಲಕೋಟೆ: ನಗರದ ನವನಗರ ರಸ್ತೆಯಲ್ಲಿರುವ ಶ್ರೀದಿಗಂಬರೇಶ್ವರ ಮಠದ ಜಾತ್ರಾ ಮಹೋತ್ಸವವು ಏ.೩೦ ರಿಂದ ಮೇ ೨ ರವರೆಗೆ ಅದ್ಧೂರಿಯಾಗಿ ಜರುಗಲಿದೆ. ಏ.೩೦ರ ಬುಧವಾರ ಬೆಳಗ್ಗೆ ೫ಕ್ಕೆ ಕರ್ತು ಗದ್ದುಗೆ, ಉತ್ಸವ ಮೂರ್ತಿಗಳಿಗೆ ರುದ್ರಾಭಿಷೇಕ, ಗಣಾರಾಧನೆ. ಮಧ್ಯಾಹ್ನ ೧೨.೩೫ಕ್ಕೆ ಮಹಾಪ್ರಸಾದ. ಮೇ ೧ರ ಗುರುವಾರ ಬೆಳಗ್ಗೆ ೬ಕ್ಕೆ ಕರ್ತು ಗದ್ದುಗೆ, ಉತ್ಸವ ಮೂರ್ತಿ, ಪಲ್ಲಕ್ಕಿ , ತೇರು ಹಾಗೂ ನೂತನ ಅಶ್ವಕ್ಕೆ ಮಹಾಪೂಜೆ. ಮಧ್ಯಾಹ್ನ ಮಹಾಪ್ರಸಾದವಿರಲಿದೆ. ಸಂಜೆ ಟಗರಿನ ಕಾಳಗ ಜರುಗಲಿದೆ.

ಮೇ ೨ರ ಶುಕ್ರವಾರ ಬೆಳಗ್ಗೆ ೬ಕ್ಕೆ ಮಹಾಪೂಜೆ, ಮಧ್ಯಾಹ್ನ ಪ್ರಸಾದ, ನಂತರ ಸಂಜೆ ೫.೪೫ಕ್ಕೆ ಶ್ರೀದಿಗಂಬರೇಶ್ವರ, ಶ್ರೀಮಾತಾ ಕಪ್ಪರ ಪಡಿಯಮ್ಮನವರ ಉತ್ಸವ ಮೂರ್ತಿಗಳಿಗೆ, ತೇರಿನ ಕಳಸಕ್ಕೆ ಪೂಜೆ ಸಲ್ಲಿಸಿ, ತೇರಿನ ಕಳಸದ ಪ್ರತಿಷ್ಠಾಪನೆಯೊಂದಿಗೆ ೯ನೇ ವರ್ಷದ ಮಹಾರಥೋತ್ಸವ ಜರುಗಲಿದೆ. ಶ್ರೀಬಸವರಾಜಪ್ಪನವರ ಸಾನಿಧ್ಯದಲ್ಲಿ ನಡೆಯುವ ಜಾತ್ರಾಮಹೋತ್ಸವದಲ್ಲಿ ಮಠಾಧೀಶರು, ಗಣ್ಯರು ಭಾಗಿಯಾಗಲಿದ್ದಾರೆ. ಕಾರ್ಯಕ್ರಮದಲ್ಲಿ ಶ್ರೀಬಸಪ್ಪಜ್ಜನವರ ಕುರಿತಾದ ಗ್ರಂಥಲೋಕಾರ್ಪಣೆ ಆಗಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net