

ಚಿತ್ರದುರ್ಗ: ತಾಯಿ ಮಗನ ಬಾಂಧವ್ಯ ಕಥೆ ಪ್ರಧಾನವಾಗಿರುವ ‘ನಿಂಬಿಯಾ ಬನಾದ ಮ್ಯಾಗ..ಪೇಜ್-1’ ಸಿನಿಮಾ ಏಪ್ರಿಲ್ 4 ರಂದು ರಾಜ್ಯಾದ್ಯಂತ ತೆರೆ ಕಾರಣಲಿದೆ ಎಂದು ಸಿನಿಮಾದ ನಾಯಕ ನಟ, ಡಾ.ರಾಜಕುಮಾರ್ ಮೊಮ್ಮಗ ಷಣ್ಮುಖ ಗೋವಿಂದರಾಜ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದು ನನ್ನ ಅಭಿನಯದ ಮೊದಲ ಸಿನಿಮಾ. ವ್ಯವಹಾರದೊಂದಿಗೆ ಈಗ ಸಿನಿಮಾದಲ್ಲೂ ತೊಡಗಿಸಿಕೊಂಡಿದ್ದೇನೆ. ಜಾನಪದ ಸೊಗಡಿನ ಹೆಸರನ್ನು ಚಿತ್ರದ ಶೀರ್ಷಿಕೆಯನ್ನಾಗಿಸಲಾಗಿದೆ. 25 ವರ್ಷದ ಬಳಿಕ ಮಗ ತಾಯಿ ಹುಡುಕಿಕೊಂಡು ಊರಿಗೆ ಬರುವುದು, ಬಂದ ಬಳಿಕ ಏನೆಲ್ಲ ಆಗುತ್ತದೆ ಎಂಬ ಸಿನಿಮಾದ ಕಥೆಯಾಗಿದೆ ಎಂದು ತಿಳಿಸಿದರು.
ಎರಡು ಹಂತಗಳಲ್ಲಿ ಸಿನಿಮಾ ತೆರೆ ಕಾಣಲಿದ್ದು, ಪೇಜ್ 1ರ ಬಳಿಕ ಪೇಜ್ 2ಬಿಡುಗಡೆಯಾಗಲಿದೆ. ನಾಯಕಿಯಾಗಿ ತನುಶ್ರೀ ನಟಿಸಿ ದ್ದಾರೆ. ಸಂಗೀತಾ, ಪದ್ಮಾ ವಾಸಂತಿ, ರಾಮಕೃಷ್ಣ, ಮೂಗು ಸುರೇಶ್, ಸಂದೀಪ್ ಮಲಾನಿ, ತ್ರಿಷಾ ಮತ್ತಿತರರು ಅಭಿನಯಿಸಿದ್ದಾರೆ. ಚಿಕ್ಕಮಗಳೂರಿನ ಮಲ್ಲಂದೂರು, ಹೆಬ್ರಿ, ಆಗುಂಬೆ ಸೇರಿ ಮಲೆನಾಡಿನ ಭಾಗಗಳಲ್ಲೇ ಶೇ.70 ಚಿತ್ರೀಕರಣ ನಡೆದಿದೆ. ಸಿನಿಮಾದಲ್ಲಿ 4 ಹಾಡುಗಳಿವೆ ಎಂದರು.
ಕಥೆ-ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ನಿರ್ದೇಶಕ ಅಶೋಕ್ ಕಡಬ, ಇದೊಂದು ಕುಟುಂಬ ಸದಸ್ಯರೆಲ್ಲರೂ ನೋಡಬಹು ದಾದ ಉತ್ತಮ ಚಿತ್ರವಾಗಿದೆ ಎಂದರು.
ಮೇಘಮಾಲೆ ಚಿತ್ರದ ಬಳಿಕ ಬಹಳ ವರ್ಷಗಳ ನಂತರದಲ್ಲಿ ಈ ಸಿನಿಮಾದ ಮೂಲಕ ಬಣ್ಣ ಹಚ್ಚಿ ದ್ದೇನೆ ಎಂದು ನಟ ಸುನಾದ್‌ರಾಜ್ ಹೇಳಿದರು.
ಚಿತ್ರದ ನಿರ್ಮಾಪಕ ವಿ.ಮಾದೇಶ್, ಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್,ತಿಪ್ಪೇಸ್ವಾಮಿ ಇದ್ದರು.