ಏ.30ರವರೆಗೆ ನಾಲೆಗೆ ನೀರು ಹರಿಸಿ

17 KAMPLI 03
Published on

ಕಂಪ್ಲಿ: ಬೆಳೆ ರಕ್ಷಣೆಗಾಗಿ ಏ.30 ರತನಕ ಕಾಲುವೆಗೆ ನೀರು ಹರಿಸುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಒತ್ತಾಯಿಸಿದರು.

ಪಟ್ಟಣದ ಅತಿಥಿಗೃಹ ಆವರಣದಲ್ಲಿ ಸಂಘದ ಸದಸ್ಯರ ಸಭೆಯಲ್ಲಿ ಸೋಮವಾರ ಮಾತನಾಡಿದರು. ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಎಲ್‌ಎಲ್ ಕಾಲುವೆಗೆ ಮಾ.31ರ ತನಕ ನೀರು ಹರಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಏ.30ರ ತನಕ ನೀರು ಹರಿಸದಿದ್ದಲ್ಲಿ ಭತ್ತದ ಬೆಳೆ ರೈತರ ಕೈತಪ್ಪಲಿದೆ. ಬೆಳೆ ನಷ್ಟಗೊಂಡಲ್ಲಿ ಟಿಬಿ ಜಲಾಶಯ ಮಂಡಳಿಯೇ ನಷ್ಟ ಪರಿಹಾರ ಭರಿಸಬೇಕಾಗುತ್ತದೆ. ಜಲಾಶಯದ ನೀರನ್ನು ವೃಥಾ ವ್ಯರ್ಥಗೊಳಿಸದೆ ಸಮರ್ಪಕವಾಗಿ ಬಳಸುವ ಮೂಲಕ ಏ.30 ರ ತನಕ ಎಲ್‌ಎಲ್ ಕಾಲುವೆಗೆ ಹರಿಸುವಂತೆ ಒತ್ತಾಯಿಸಿದರು.

ಏ.10 ರ ತನಕ ಎಲ್‌ಎಲ್‌ಸಿಗೆ ನೀರು ಹರಿಸುವಂತೆ ಬಳ್ಳಾರಿ ಡಿಸಿಗೆ ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಜಿ.ಪುರುಷೋತ್ತಮಗೌಡ ಮನವಿ ಸಲ್ಲಿಸಿದ್ದು ಸರಿಯಲ್ಲ. ಏ.30ರತನಕ ನೀರು ಹರಿಸಿದಲ್ಲಿ ಶೇ.90 ಭತ್ತದ ಬೆಳೆ ದಕ್ಕಲು ಸಾಧ್ಯವಿದೆ. ಭತ್ತ ಬೆಳೆದ ರೈತರು ಸರಣಿ ನಷ್ಟಗೊಂಡಿದ್ದಾರೆ. ರೈತರ ಪರಿಸ್ಥಿತಿ ಸರಿಯಾಗಿ ಅರಿಯದೆ ಡಿಸಿಗೆ ಮನವಿ ಕೊಟ್ಟಿರುವುದು ಸರಿಯಲ್ಲ ಏ.30ರತನಕ ನೀರು ಹರಿಸುವಂತೆ ಡಿಸಿಯನ್ನು ಒತ್ತಾಯಿಸಬೇಕು ಎಂದು ಒತ್ತಾಯಿಸಿದರು.

ರೈತರಾದ ಡಾ.ಎ.ಸಿ.ದಾನಪ್ಪ, ಪಿ.ನಾರಾಯಣರೆಡ್ಡಿ, ಕೆ.ರಮೇಶ್, ಆದೋನಿ ರಂಗಪ್ಪ, ವಿ.ವೀರೇಶ್, ಆನಂದರೆಡ್ಡಿ, ತಿಮ್ಮಪ್ಪನಾಯಕ, ಡಿ.ಮುರಾರಿ, ಗಂಗಣ್ಣ, ಸುದರ್ಶನ, ಜಡೆಪ್ಪ, ವಿ.ಟಿ.ರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net