ಏ.21 ಮತ್ತು 22ರಂದು ಬಸವ ಜಯಂತಿ

10
Published on

ಮೈಸೂರು: ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ವಿವಿಧ ಲಿಂಗಾಯತ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಗರದ ಹೊಸಮಠದಲ್ಲಿ ಏ.21 ಮತ್ತು 22ರಂದು ಬಸವ ಜಯಂತಿ ಆಚರಿಸಲು ತೀರ್ಮಾನಿಸಲಾಗಿದೆ.


ಹೊಸಮಠದ ನಟರಾಜ ಸಭಾ ಭವನದಲ್ಲಿ ಜಯಂತಿ ಕುರಿತು ಸೋಮವಾರ ಪೂರ್ವಭಾವಿ ಸಭೆ ನಡೆಯಿತು. 21ರ ಬೆಳಗ್ಗೆ 10ಕ್ಕೆ ಮೈಸೂರು ತಾಲೂಕಿನ 500ಕ್ಕೂ ಹೆಚ್ಚು ಮಹಿಳೆಯರಿಗೆ ಲಿಂಗದೀಕ್ಷೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಜೆ 6ಕ್ಕೆ ಅಕ್ಕಮಹಾದೇವಿ ಜಯಂತಿಯ ಬಳಿಕ ಪಿ.ಲಂಕೇಶ್ ರಚನೆಯ ಸಂಕ್ರಾಂತಿ ನಾಟಕ ಪ್ರದರ್ಶನ ನಡೆಯಲಿದೆ.


22ರ ಬೆಳಗ್ಗೆ 10ಕ್ಕೆ ಬಸವ ಜಯಂತಿ ಸಭಾ ಕಾರ್ಯಕ್ರಮ ಜರುಗಲಿದೆ. ಬಳಿಕ ವೈಚಾರಿಕ ಚಿಂತನ ಗೋಷ್ಠಿ ಆಯೋಜಿಸಲು ತೀರ್ಮಾನಿಸಲಾಗಿದೆ. ಸಂಜೆ 6ಕ್ಕೆ ಬಸವಮೂರ್ತಿ ಮೆರವಣಿಗೆ ಹೊಸಮಠದಿಂದ ಪ್ರಾರಂಭವಾಗಲಿದ್ದು, ನಗರದ ಪ್ರಮುಖ ಬೀದಿಯಲ್ಲಿ ಸಾಗಲಿದೆ. ಜಯಂತಿ ಕುರಿತು ಏ.9ರಂದು ಅಂತಿಮ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಬಸವ ಜಯಂತಿ ಆಚರಣಾ ಸಮಿತಿಯ ಸಂಚಾಲಕ ಮಹದೇವಪ್ಪ ತಿಳಿಸಿದರು. ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net