ಎಸ್​ಸಿ/ಎಸ್​ಟಿಗಳಿಗೆ ನಿವೇಶನ : ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಡಿಸಿ ಸೂಚನೆ

2
Published on

ರಾಮನಗರ: ಜಿಲ್ಲೆಯ ನಾಲ್ಕು ತಾಲೂಕುಗಳ ನಗರ ವ್ಯಾಪ್ತಿಯ 5 ಕಿ.ಮೀ. ಒಳಗೆ ಲಭ್ಯವಿರುವ ಸರ್ಕಾರಿ ಜಮೀನುಗಳನ್ನು ಗುರುತಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡದ ನಿವೇಶನರಹಿತರಿಗೆ ನೀಡಲು ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಅವಿನಾಶ್​ ಮೆನನ್​ ರಾಜೇಂದ್ರನ್​ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅನುಸೂಚಿತ ಜಾತಿ ಮತ್ತು ಪಂಗಡಗಳ ದೌರ್ಜನ್ಯ ಪ್ರತಿಬಂಧ ಕಾಯ್ದೆ 1989&2015ರ ಅನುಷ್ಠಾನ ಸಂಬಂಧ ನಡೆದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.

ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಎಸ್​ಸಿ/ಎಸ್​ಟಿ ಪಂಗಡದ ಜನರಿಗೂ ನಿವೇಶನಗಳನ್ನು ಗುರುತಿಸಿ ಹಂಚಿಕೆ ಮಾಡಬೇಕು. ಪೋಡಿ, ದುರಸ್ತಿ ದಾಖಲೆಗಳನ್ನು ಸಾರ್ವಜನಿಕರಿಗೆ ಇನ್ನು ಮುಂದೆ ಶ್ರೀವೇ ದೊರೆಯುವಂತೆ ಮಾಡಲಾಗುವುದು. ದಾಖಲೆಗಳ ಕೊರತೆ ಇದ್ದಲ್ಲಿ ಸರಿಪಡಿಸಿ ನೀಡುವುದಾಗಿ ತಿಳಿಸಿದರು.

ಕೆಎಸ್​ಆರ್​ಟಿಸಿ, ಎಪಿಎಂಸಿ, ನಗರಸಭೆ, ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಮಳಿಗೆಗಳನ್ನು ಸಿಎಂಸಿ ಅಥವಾ ಲೋಕೋಪಯೋಗಿ ಇಲಾಖೆ ನಿಗದಿಪಡಿಸುವ ದರಗಳ ಅನ್ವಯ ನೀಡುವುದು ಹಾಗೂ ಈ ಮಳಿಗೆಗಳನ್ನು ಹಂಚಿಕೆ ಮಾಡುವಾಗ ಮೀಸಲಾತಿ ನಿಯಮ ಪಾಲಿಸಬೇಕು. ಲಾಟರಿ ಮೂಲಕ ಮಳಿಗೆಗಳನ್ನು ಹಂಚಿಕೆ ಮಾಡುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯಲ್ಲಿ ಧಾಮಿರ್ಕ ದತ್ತಿ ಇಲಾಖೆಗೆ ಒಳಪಡುವ 813 ದೇವಾಲಯಗಳಿದ್ದು, ಎಸ್​ಸಿ/ಎಸ್​ಟಿ ಸಮುದಾಯದ ನಿರುದ್ಯೋಗಿ ಯುವ, ಯುವತಿಯರಿಗೆ ಉದ್ಯೋಗ ನೀಡುವುದು ಹಾಗೂ ದೇವಾಲಯ ಪ್ರವೇಶ ಮಾಡಲು ಮುಕ್ತ ಅವಕಾಶವಿರುವುದಾಗಿ ಕಡ್ಡಾಯವಾಗಿ ನಾಮಲಕ ಹಾಕುವಂತೆ ಡಾ. ಅವಿನಾಶ್​ ಮೆನನ್​ ರಾಜೇಂದ್ರನ್​ ಹೇಳಿದರು.

ಎ್​ಐಆರ್​ ದಾಖಲಿಸಿ: ಜಿಲ್ಲೆಯಲ್ಲಿ ಒಟ್ಟು 827 ಹಳ್ಳಿಗಳಿದ್ದು ಇವುಗಳಲ್ಲಿ 12 ಹಳ್ಳಿಗಳನ್ನು ಹೊರತುಪಡಿಸಿ ಉಳಿದೆಡೆ ಸ್ಮಶಾನಗಳಿಗೆ ಜಮೀನು ಇದೆ. ಎಸ್​ಸಿ /ಎಸ್​ಟಿ ಪಂಗಡದ ಜನಕ್ಕೆ ಜಾಗ ನೀಡಬೇಕು, ಜಾಗ ನೀಡಲು ನಿರಾಕರಿಸುವವರ ವಿರುದ್ಧ ಎ್​ಐಆರ್​ ದಾಖಲಿಸಬೇಕು ಎಂದು ಡಾ. ಅವಿನಾಶ್​ ಮೆನನ್​ ರಾಜೇಂದ್ರನ್​ ಸೂಚಿಸಿದರು. ಚನ್ನಪಟ್ಟಣ ಮತ್ತು ರಾಮನಗರದಲ್ಲಿ ಅತ್ಯಾಧುನಿಕ ಡಾ. ಬಿ.ಆರ್​. ಅಂಬೇಡ್ಕರ್​ ಭವನ, ಬುದ್ಧ ವಿಹಾರ ನಿರ್ಮಾಣ, ಮಹಷಿರ್ ವಾಲ್ಮೀಕಿ ಭವನ ನಿಮಿರ್ಸಲು ನಿವೇಶನಗಳನ್ನು ಗುರುತಿಸುವಂತೆ ತಿಳಿಸಿದರು.

ದೌರ್ಜನ್ಯ ಪ್ರಕರಣಗಳ ವಿವರ ಪ್ರಕಟಿಸಿ: ಪೊಲೀಸ್​ ವರಿಷ್ಠಾಧಿಕಾರಿ ಕೆ. ಸಂತೋಷ್​ ಬಾಬು ಮಾತನಾಡಿ, ಪ್ರತಿ ಪೊಲೀಸ್​ ಠಾಣೆಯಲ್ಲಿ ಎಸ್​ಸಿ /ಎಸ್​ಟಿ ಸಮುದಾಯದ ವಿರುದ್ಧ ನಡೆಯುವ ದೌರ್ಜನ್ಯ ಪ್ರಕರಣಗಳ ವಿವರಗಳನ್ನು ಪ್ರಕಟಣಾ ಲಕ ಅಳವಡಿಸಿ, ಪ್ರತಿ ತಿಂಗಳು ಠಾಣೆಯಲ್ಲಿ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಜಿಪಂ ಸಿಇಇ ದಿಗ್ವಿಜಯ ಬೋಡ್ಕೆ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಯೋಗೀಶ್​, ನಗರಸಭೆ ಆಯುಕ್ತ ನಂದಕುಮಾರ್​ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net