ಎಸ್​ಡಿಸಿಗೆ ಕರೊನಾ ಪಾಸಿಟಿವ್

h29-Mini Vidhan Soudha 1
Published on

ಹುಬ್ಬಳ್ಳಿ: ಇಲ್ಲಿನ ಮಿನಿವಿಧಾನ ಸೌಧದ ತಾಲೂಕು ಪಂಚಾಯಿತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವಕನಿಗೆ (27) ಕರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ 24 ಗಂಟೆ ಸೀಲ್​ಡೌನ್ ಮಾಡಲಾಗಿದ್ದು, ಸ್ಯಾನಿಟೇಜೇಷನ್ ಕಾರ್ಯ ನಡೆದಿದೆ.

ಮನೆಗೆ ಬಂದಿದ್ದ ತಮ್ಮ ಗೆಳೆಯನಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಎಸ್​ಡಿಸಿ ತಾನೂ ಗಂಟಲ ದ್ರವ ಪರೀಕ್ಷೆ ಮಾಡಿಸಿಕೊಂಡಿದ್ದ. ವರದಿ ಪಾಸಿಟಿವ್ ಬಂದಿದ್ದರಿಂದ ಈಗ ಕಿಮ್ಸ್​ಗೆ ದಾಖಲಿಸಲಾಗಿದೆ. ವರದಿ ಬರುವವರೆಗೆ ಆತ ಮನೆಯಲ್ಲಿಯೇ ಉಳಿದಿದ್ದನಾದರೂ ಆತನೊಟ್ಟಿಗೆ ಕೆಲಸ ಮಾಡಿದ್ದವರಿಗೆ ನಡುಕ ಶುರುವಾಗಿದೆ. ಆತನ ಸಂಪರ್ಕ ಹೊಂದಿದ್ದ ಕೆಲವರ ಗಂಟಲ ದ್ರವ ಪರೀಕ್ಷೆಯನ್ನೂ ಮಾಡಿಸಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಹೊರ ಬಂದ ಸಿಬ್ಬಂದಿ: ಸೋಂಕು ದೃಢಪಟ್ಟ ವರದಿ ಬೆಳಗ್ಗೆ ಅಧಿಕಾರಿಗಳ ಕೈ ಸೇರಿದೆ. ಸುದ್ದಿ ಹೊರಗಡೆ ಹರಡುತ್ತಿದ್ದಂತೆ ಬಹಳಷ್ಟು ನೌಕರರು ಮಿನಿವಿಧಾನ ಸೌಧದಿಂದ ಹೊರಬಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net