ಎಸ್​ಡಬ್ಲುಆರ್ ನಿಂದ ಇಂಟ್ಯುಬೆಶನ್ ಬಾಕ್ಸ್ ತಯಾರಿ

h1-SWR
Published on

ಹುಬ್ಬಳ್ಳಿ: ಕರೊನಾ ಸೋಂಕಿತರ ಚಿಕಿತ್ಸೆಗಾಗಿ ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿ ವರ್ಕ್​ಶಾಪ್ ನೂತನ ಇಂಟ್ಯುಬೆಶನ್ ಬಾಕ್ಸ್​ಗಳನ್ನು ಸಿದ್ಧಪಡಿಸಿದೆ.

ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ನರ್ಸ್​ಗಳಿಗೆ ಸೋಂಕು ತಗುಲಬಾರದೆಂಬ ಉದ್ದೇಶದಿಂದ ಹುಬ್ಬಳ್ಳಿ ವರ್ಕ್​ಶಾಪ್ ಇತ್ತೀಚೆಗೆ ಕಾಂಟ್ಯಾಕ್ಟ್​ಲೆಸ್ ಕ್ಯುಬಿಕಲ್ಸ್​ಗಳನ್ನು ತಯಾರಿಸಿತ್ತು.

ಇದೀಗ ವೈದ್ಯರು ಹಾಗೂ ನರ್ಸ್​ಗಳಿಗೆ ಸೋಂಕು ತಾಗದಂತೆ ಚಿಕಿತ್ಸೆ ನೀಡುವ ಇಂಟ್ಯುಬೆಶನ್ ಬಾಕ್ಸ್ ಅನ್ನು ಹುಬ್ಬಳ್ಳಿ ವರ್ಕ್​ಶಾಪ್ ಸಂಶೋಧಿಸಿದೆ. 3 ಮಿಮೀ ಅಕ್ರಿಲಿಕ್ ಶೀಟ್​ನಿಂದ ಈ ಇಂಟ್ಯುಬೆಶನ್ ತಯಾರಿಸಲಾಗಿದೆ. ನೈಋತ್ಯ ರೈಲ್ವೆ ವಲಯದ ವೈದ್ಯಕೀಯ ವಿಭಾಗದಿಂದ ಈ ಇಂಟ್ಯುಬೆಶನ್​ಗೆ ವೈದ್ಯಕೀಯ ಪ್ರಮಾಣ ಪತ್ರ ಲಭಿಸಿದೆ.

ನೈಋತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಅಜಯಕುಮಾರ ಸಿಂಗ್ ಅವರು ಹುಬ್ಬಳ್ಳಿ ವರ್ಕ್​ಶಾಪ್​ನ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net