ಎಸ್​ಐಆರ್​ಸಿ ಹುಬ್ಬಳ್ಳಿ ಅಧ್ಯಕ್ಷ ಸುಭಾಸ

h2-SIRC
Published on

ಹುಬ್ಬಳ್ಳಿ: ಅಖಿಲ ಭಾರತ ಲೆಕ್ಕಪರೀಶೋಧಕರ ಸಂಸ್ಥೆ ಹುಬ್ಬಳ್ಳಿ ಶಾಖೆಯ ವಾರ್ಷಿಕೋತ್ಸವ ಮತ್ತು 2020-21ನೇ ಸಾಲಿನ ನೂತನ ಪದಾಧಿಕಾರಿಗಳ ಅಧಿಕಾರ ಗ್ರಹಣ ಸಮಾರಂಭ ಐಸಿಎಐ ಭವನದಲ್ಲಿ ಏರ್ಪಡಿಸಲಾಗಿತ್ತು.

ನೂತನ ಅಧ್ಯಕ್ಷರಾಗಿ ಸುಭಾಸ ಪಾಟೀಲ, ಉಪಾಧ್ಯಕ್ಷ ಮತ್ತು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಎಚ್.ಎನ್. ಅದೀನವರ, ಕಾರ್ಯದರ್ಶಿಯಾಗಿ ಅಮಿತ್ ಬಾಬಾಜಿ, ಕೋಶಾಧ್ಯಕ್ಷರಾಗಿ ಮಲ್ಲಿಕಾರ್ಜುನ ಪಿಸೆ ಹಾಗೂ ಸದಸ್ಯರಾಗಿ ಕೆ.ವಿ. ದೇಶಪಾಂಡೆ ಅಧಿಕಾರ ಸ್ವೀಕರಿಸಿದರು.

ಅತಿಥಿಯಾಗಿದ್ದ ಬೆಳಗಾವಿ ವಿಭಾಗದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಂಡಳಿ ನಿರ್ದೇಶಕ ಬಿ.ಕೆ.ಎಸ್. ವರ್ಧನ್ ಮಾತನಾಡಿ, ಲೆಕ್ಕ ಪರಿಶೋಧಕರು ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.

ನೂತನ ಅಧ್ಯಕ್ಷ ಸುಭಾಸ ಪಾಟೀಲ, ಮುಂದಿನ 1 ವರ್ಷದ ಉದ್ದೇಶಿತ ಕಾರ್ಯಚಟುವಟಿಕೆಗಳ ವಿವರ ನೀಡಿದರು. ಕಳೆದ ನವೆಂಬರ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ 9 ಮಂದಿ ಹೊಸ ಲೆಕ್ಕ ಪರಿಶೋಧಕರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net