

ಚಿತ್ರದುರ್ಗ: ಶಿಕ್ಷಕರು ಮಕ್ಕಳ ಮನಸ್ಸಿಗೆ ನಾಟುವಂತೆ ಬೋಧಿಸ ಬೇಕು. ಗುಣಮಟ್ಟದ ಶಿಕ್ಷಣದಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಿದೆ ಎಂದು ಡಿಡಿಪಿಐ ಕೆ.ರವಿಶಂರ್‌ರೆಡ್ಡಿ ಹೇಳಿದರು.
ರಾಜ್ಯಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘದ ಜಿಲ್ಲಾ ಶಾಖೆ ನಗರದ ಸಿ.ಎನ್.ಸಿ.ಪ್ರೌಢಶಾಲೆಯಲ್ಲಿ ಜಿಲ್ಲೆಯ ಹಿಂದಿ ಶಿಕ್ಷಕರಿಗೆ ಗುರುವಾ ರ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು,ಜಿಲ್ಲೆ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶಗಳಿಸುವಲ್ಲಿ ಹಿಂದಿ ಶಿಕ್ಷಕರ ಶ್ರಮವೂ ಇದೆ.
ಫಲಿತಾಂಶದಲ್ಲಿ ಜಿಲ್ಲೆ ರಾಜ್ಯಕ್ಕೆ ನಂ.1 ಸ್ಥಾನ ಗಳಿಸಲು ನಿರಂತರ ಶೈಕ್ಷಣಿಕ ಚಟುವಟಿಕೆಗಳು ಕಾರಣವಾಗಿವೆ. ಶಿಕ್ಷಕರ ಶ್ರಮ ಸಾರ್ಥಕ ವಾಗಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲೂ ನಮ್ಮ ಜಿಲ್ಲೆ ಗಳಿಸಿರುವ ನಂ.1 ಸ್ಥಾನವನ್ನು ಕಾಪಾಡಿಕೊಳ್ಳ ಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿ ಗಳನ್ನು ಅಣಿಗೊಳಿಸಬೇಕೆಂದರು.
ಸಂಪನ್ಮೂಲ ವ್ಯಕ್ತಿಗಳಾದ ಶ್ರೀನಿವಾಸ್‌ಕುಮಾರ್,ಕೇಶವ್‌ಈಶ್ವರಪ್ಪ ಅವರು ಉಪನ್ಯಾಸ ನೀಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆ ನೋಡಲ್ ಅಧಿ ಕಾರಿ ಎನ್.ಆರ್.ತಿಪ್ಪೇಸ್ವಾಮಿ,ಡಿವೈಪಿಸಿ ಸಿ.ಎಂ.ತಿಪ್ಪೇಸ್ವಾಮಿ,ವಿಷಯ ಪರಿವೀಕ್ಷಕರಾದ ಶಿವಣ್ಣ,ಗೋವಿಂದಪ್ಪ,ಸವಿತಾ,ಚಂದ್ರಣ್ಣ, ಓಲೇಕಾರ್,ಗೋವಿಂದರೆಡ್ಡಿ,ಶ್ರೀನಿವಾಸ್‌ರೆಡ್ಡಿ,ಹಿಂದಿ ಸಹ ಶಿಕ್ಷಕ ಡಿ.ಎಸ್.ಆನಂದ್ ಮತ್ತಿತರರು ಇದ್ದರು.
(ಸಿಟಿಡಿ 3ಹಿಂದಿ)
ಪ್ರೌಢಶಾಲೆ ಹಿಂದಿ ಶಿಕ್ಷಕರಿಗೆ ಚಿತ್ರದುರ್ಗದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಡಿಡಿಪಿಐ ಕೆ.ರವಿಶಂಕರ್‌ರೆಡ್ಡಿ ಉ ದ್ಘಾಟಿಸಿದರು.ಎನ್.ಆರ್.ತಿಪ್ಪೇಸ್ವಾಮಿ,ಸಿ.ಎಂ.ತಿಪ್ಪೇಸ್ವಾಮಿ,ಶಿವಣ್ಣ,ಗೋವಿಂದಪ್ಪ,ಸವಿತಾ,ಚಂದ್ರಣ್ಣ,ಶ್ರೀನಿವಾಸ್‌ಕುಮಾರ್, ಕೇಶವ್ ಈಶ್ವರಪ್ಪ,ಡಿ.ಎಸ್.ಆನಂದ್ ಇತರರು ಇದ್ದರು.