ಎಸ್ಸೆಸ್ಸೆಲ್ಸಿ-೨ ಪರೀಕ್ಷೆಗೆ ವಿಶೇಷ ತರಗತಿ

dr akash shankar
Published on

ಕಲಬುರಗಿ: ಎಸ್ಸೆಸ್ಸೆಲ್ಸಿ ೨ನೇ ಪರೀಕ್ಷೆಗೆ ಸಿದ್ಧತೆ ಮಾಡಲು ವಿಶೇಷ ತರಗತಿ ನಡೆಸಲು ಯೋಜಿಸಿದ್ದು, ಪ್ರೌಢಶಾಲೆ ಶಿಕ್ಷಕರು ಸಹಕರಿಸುವಂತೆ ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ಡಾ.ಆಕಾಶ ಶಂಕರ ಕೋರಿದ್ದಾರೆ. ರಾಜ್ಯ ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ಅಧ್ಯಕ್ಷರು/ಕಾರ್ಯದರ್ಶಿಗೆ ಪತ್ರ ಬರೆದಿರುವ ಡಾ.ಆಕಾಶ, ೨೦೨೩-೨೪ರ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಇದರಲ್ಲಿ ಅನುತ್ತೀರ್ಣ ಅಥವಾ ಮತ್ತೊಮ್ಮೆ ಪರೀಕ್ಷೆ ಬರೆಯುವವರಿಗಾಗಿ ಜೂ.೭ರಂದು ಪ್ರಾರಂಭವಾಗಲಿದೆ. ಮೇ ೧೫ರಿಂದ ಜೂ.೫ರವರೆಗೆ ವಿಶೇಷ ತರಗತಿ ನಡೆಸಲು ಅವಕಾಶವಿದೆ. ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಅನುತ್ತೀರ್ಣ ಮತ್ತು ಕಡಿಮೆ ಅಂಕ ಗಳಿಸಿದ ಮಕ್ಕಳಿಗೆ ಕಡ್ಡಾಯವಾಗಿ ರಜಾ ದಿನ ಒಳಗೊಂಡು ವಿಶೇಷ ತರಗತಿ ಮೂಲಕ ಪಾಸಾಗುವಂತೆ ಮತ್ತು ಹೆಚ್ಚಿನ ಅಂಕ ಪಡೆಯುವಂತೆ ಸಜ್ಜುಗೊಳಿಸುವ ಉz್ದೆÃಶವಿದೆ. ಕರ್ತವ್ಯಕ್ಕೆ ಹಾಜರಾಗುವ ಶಿಕ್ಷಕರಿಗೆ ಗಳಿಕೆ ರಜೆ ಮಂಜೂರು ಜತೆಗೆ ಎಲ್ಲ ಸೌಲಭ್ಯ ಒದಗಿಸಲಾಗುವುದು. ಕಲ್ಯಾಣ ಕರ್ನಾಟಕ ಪ್ರದೇಶ ಹಿನ್ನಡೆ ಫಲಿತಾಂಶ ಸಾಧಿಸಿದ್ದರಿಂದ ೨ನೇ ಪರೀಕ್ಷೆ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net