ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರ

IMG-20250321-WA0094
Published on

ಅರಸೀಕೆರೆ: ತಾಲೂಕಿನ ಹನ್ನೊಂದು ಕೇಂದ್ರಗಳಲ್ಲಿ ಶುಕ್ರವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರವಾಗಿ ನಡೆಯಿತು. ತಹಸೀಲ್ದಾರ್ ಎಂ.ಜಿ.ಸಂತೋಷ್‌ಕುಮಾರ್ ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಬಳಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡಿ ಪರೀಕ್ಷಾ ಕೊಠಡಿಗಳಿಗೆ ಕಳುಹಿಸಿಕೊಟ್ಟರು.

ಬಿಇಒ ಮೋಹನ್‌ಕುಮಾರ್ ಮಾತನಾಡಿ, ತಾಲೂಕಿನಲ್ಲಿ 1872 ಬಾಲಕರು, 1801 ಬಾಲಕಿಯರು ಸೇರಿದಂತೆ 3,673 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ನಗರದ ಸರ್ಕಾರಿ ಬಾಲಕ, ಬಾಲಕಿಯರ ಪ್ರೌಢಶಾಲೆ, ಬಸವೇಶ್ವರ, ಸಂತಮೇರಿ ಪ್ರೌಢಶಾಲೆ, ಬಾಣಾವರ ಸರ್ಕಾರಿ ಪ್ರೌಢಶಾಲೆ, ಜಾವಗಲ್, ಗಂಡಸಿ ಸಂತೆ ಮೈದಾನ, ಹಾರನಹಳ್ಳಿ, ಚಿಂದೇನಹಳ್ಳಿ ಗಡಿ, ಡಿಎಂ ಕುರ್ಕೆ ಹಾಗೂ ಇಂದಿರಾಗಾಂಧಿ ವಸತಿ ಶಾಲೆ ರಾಮನಹಳ್ಳಿ ಕೇಂದ್ರದಲ್ಲಿ ಪರೀಕ್ಷೆ ನಡೆಯಿತು ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net