

ಹೊಸಪೇಟೆ: ಎರಡನೇ ದಿನವಾದ ಎಸ್ಸೆಸ್ಸೆಲ್ಸಿಯ ಗಣಿತ ಪರೀಕ್ಷೆ ನಗರ ಸಏರಿದಂತೆ ಜಿಲ್ಲಾಧ್ಯಾಂತ ಶನಿವಾರ ಯಶಸ್ವಿಯಾಗಿ ನಡೆಯಿತು. ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಪರೀಕ್ಷೆಗೆ ಅವಶ್ಯವಾದ ಎಲ್ಲಾ ಕ್ರಮಗಳನ್ನೊಳಗೊಂಡ ನಿಯಮ ಪಾಲಿಸಿ ಸುಸೂತ್ರವಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಗಿತ್ತು. ನಗರ ಹಾಗೂ 6 ತಾಲೂಕುಗಳಲ್ಲಿ 71 ಪರೀಕ್ಷಾ ಕೇಂದ್ರಗಳಲ್ಲಿ ನೋಂದಾಯಿತ 20,795 ಪರೀಕ್ಷಾರ್ಥಿಗಳಲ್ಲಿ 20,320 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 475 ವಿದ್ಯಾರ್ಥಿಗಳು ಗೈರಾಗಿದ್ದರು.
ಗ್ರಾಮೀಣ ಪ್ರದೇಶದಿಂದ ಪರೀಕ್ಷಾ ಕೇಂದ್ರಗಳಿಗೆ ಬರುವ ವಿದ್ಯಾರ್ಥಿಗಳಿಗೆ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಪರೀಕ್ಷಾ ಎಲ್ಲಾ ಕೊಠಡಿಗಳನ್ನು ಪರೀಕ್ಷೆಗೆ ಮುನ್ನ ವಿದ್ಯಾರ್ಥಿಗಳಿಗೆ ಪರಿಶೀಲನೆ ಮಾಡಲಾಯಿತು.