ಎಸ್ಸಿ, ಎಸ್ಟಿ ಗುತ್ತಿಗೆದಾರರ ಮೀಸಲಿಗೆ ಕತ್ತರಿ

ambedkar
Published on

ಕಲಬುರಗಿ: ರಾಜ್ಯ ಸರ್ಕಾರ ಎಸ್‌ಸಿ, ಎಸ್ಟಿ ಗುತ್ತಿಗೆದಾರರ ಅನುಕೂಲಕ್ಕಾಗಿ ಕಾಮಗಾರಿಗಳಿಗಾಗಿ ಮೀಸಲು ನಿಗದಿ ಮಾಡಿದೆ. ಆದರೆ ಅಧಿಕಾರಿಗಳು ಸರ್ಕಾರದ ಆದೇಶ ಉಲ್ಲಂಘಿಸಿ, ಕಾಮಗಾರಿಗಳು ಎಸ್ಸಿ, ಎಸ್ಟಿ ಗುತ್ತಿಗೆದಾರರಿಗೆ ದೊರೆಯದಂತೆ ಮಾಡುತ್ತಿದ್ದಾರೆ ಎಸ್ಸಿ, ಎಸ್ಟಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಜೈಕುಮಾರ ದೇಗಾಂವಕರ್ ಆರೋಪಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನವನ್ನು ಕೆಆರ್‌ಐಡಿಎಲ್‌ಗೆ ನೀಡುತ್ತಿದ್ದು, ಮೀಸಲು ದೊರೆಯುತ್ತಿಲ್ಲ. ಎಲ್ಲ ಇಲಾಖೆಯಲ್ಲಿ ಪ್ಯಾಕೇಜ್ ಟೆಂಡರ್ ಕರೆಯುವುದು ಮುಂದುವರಿದ್ದು, ಮೀಸಲು ಕೈತಪ್ಪುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಕೆಆರ್‌ಐಡಿಎಲ್‌ಗೆ ಮೊದಲು ಅನುದಾನ ಬಿಡುಗಡೆ ಮಾಡಿ, ನಂತರ ಕಾಮಗಾರಿ ಆರಂಭಿಸುತ್ತಾರೆ. ಇದೇ ಮಾದರಿ ಎಲ್ಲ ಇಲಾಖೆಯಲ್ಲಿ ಟೆಂಡರ್ ಕರೆಯಬೇಕು. ಗುತ್ತಿಗೆದಾರರಿಗೆ ಕಾಮಗಾರಿ ಕೈಗೊಂಡ ನಂತರ ಬಿಲ್‌ಗಾಗಿ ವರ್ಷಗಟ್ಟಲೇ ಕಾಯುವುದು ತಪ್ಪುತ್ತದೆ ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯತ್‌ರಾಜ್ ಇಂಜಿನಿಯರಿAಗ್ ಇಲಾಖೆಯಲ್ಲಿ ತುಂಡು ಗುತ್ತಿಗೆ ಕಾಮಗಾರಿಗಳು ಎಲ್ಲ ಗುತ್ತಿಗೆದಾರರಿಗೆ ನೀಡುತ್ತಿಲ್ಲ. ಕೆಲ ಜೆಇ ಮತ್ತು ಎಇ ಅಧಿಕಾರಿಗಳು ಕೆಲವೇ ಗುತ್ತಿಗೆದಾರರ ಹೆಸರಿನ ಮೇಲೆ ಕಾಮಗಾರಿ ಮಾಡಿ ಬಿಲ್ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ತಾಲೂಕುವಾರು ಗುತ್ತಿಗೆದಾರರ ಲಿಸ್ಟ್ ಮಾಡಿ ಪ್ರತಿಯೊಬ್ಬರಿಗೆ ಕಾಮಗಾರಿ ಸಿಗುವಂತೆ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ತುಂಡು ಗುತ್ತಿಗೆ ಕಾಮಗಾರಿಗಳು ಟೆಂಡರ್ ಕರೆಯಬೇಕು ಎಂದು ಒತ್ತಾಯಿಸಿದರು.
ಶಿವಕುಮಾರ ತೊಟ್ನಳ್ಳಿ, ಬಂಡಪ್ಪ ಪಿ. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net