

ಕಲಬುರಗಿ: ಲೋಕಸಭಾ ಚುನಾವಣೆಗೆ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷ ಕಲಬುರಗಿಯ ಕ್ಷೇತ್ರದಿಂದ ಎಸ್‌ಎಂ ಶರ್ಮಾ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲಾಗುತ್ತಿದೆ ಎಂದು ಎಸ್‌ಯುಸಿಐ (ಸಿ) ಸೆಕ್ರೆಟೇರಿಯೇಟ್ ಸದಸ್ಯ ಎಂ.ಶಶಿಧರ್ ಹೇಳಿದರು.
ರಾಜ್ಯದಲ್ಲಿ ೧೯ ಕ್ಷೇತ್ರದಲ್ಲಿ ಎಸ್‌ಯುಸಿಐ ಸ್ಪರ್ಧಿಸುತ್ತಿದ್ದು, ಕಲ್ಯಾಣ ಕರ್ನಾಟಕದಲ್ಲಿ ಕಲಬುರಗಿಯಿಂದ ಎಸ್.ಎಂ.ಶರ್ಮಾ, ರಾಯಚೂರಿಂದ ರಾಮಲಿಂಗಪ್ಪ, ಕೊಪ್ಪಳದಿಂದ ಶರಣು ಗಡ್ಡಿ, ಬಳ್ಳಾರಿ ಕ್ಷೇತ್ರದಿಂದ ದೇವದಾಸ್ ಸ್ಪರ್ಧಿಸಲಿz್ದÁರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
೧೦ ವರ್ಷದಿಂದ ದೇಶವನ್ನು ಆಳುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರದಂತ ಸಮಸ್ಯೆ ಕುರಿತು ಧ್ವನಿ ಎತ್ತದೆ ಮೌನವಾಗಿದೆ. ಜಾಗತಿಕ ಹಸಿವಿನ ಸೂಚ್ಯಂಕ, ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಭಾರತದ ಸ್ಥಾನ ಪಾತಾಳಕ್ಕೆ ಕುಸಿದಿದೆ ಎಂದು ಕಿಡಿ ಕಾರಿದರು.
ರೈತರ ಹೋರಾಟಗಳಿಗೆ ಬಲ ನೀಡಲು, ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಲು, ಎನ್‌ಇಪಿ ವಿರುದ್ಧ ಹೋರಾಡಿ, ಸಾರ್ವಜನಿಕ ಶಿP್ಷÀಣ ಉಳಿಸಲು, ಯುವಜನರ, ಮಹಿಳೆಯರ ಹಿತಾಸಕ್ತಿಗಳನ್ನು ಎತ್ತಿ ಹಿಡಿಯಲು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ನಾವು ಸ್ಪರ್ಧಿಸದ ಕ್ಷೇತ್ರಗಳಲ್ಲಿ ರಾಜ್ಯದ ಮೂರು ಜನವಿರೋಧಿ ಪP್ಷÀಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಬಿಟ್ಟು ಬೇರೆ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಮತ ನೀಡಬೇಕು ಎಂದು ಮನವಿ ಮಾಡಿರು.
ಪP್ಷÀದ ಅಭ್ಯರ್ಥಿ ಎಸ್.ಎಂ.ಶರ್ಮಾ, ವಿ.ನಾಗಮ್ಮಾಳ, ಡಾ.ಸೀಮಾ ದೇಶಪಾಂಡೆ, ಮಹೇಶ ಎಸ್.ಬಿ, ಹಣಮಂತ ಎಸ್.ಎಚ್, ಸೇಹಾ ಕಟ್ಟಿಮನಿ ಇತರರಿದ್ದರು.