ಎಸ್‌ಬಿಆರ್‌ನಲ್ಲಿ ಸಂವಿಧಾನ ದಿನ ಆಚರಣೆ

2711Klb13
Published on

ಕಲಬುರಗಿ: ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟಿçÃಯ ಸಂವಿಧಾನ ದಿನ ಮಂಗಳವಾರ ಆಚರಿಸಲಾಯಿತು. ವಿದ್ಯಾರ್ಥಿಗಳು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಹಾಗೂ ಮಾಲಾರ್ಪಣೆ ಮಾಡಿ, ಚಾಲನೆ ನೀಡಿದರು.

ವಿದ್ಯಾರ್ಥಿನಿ ಪೂರ್ಣಿಮಾ ಮಾತನಾಡಿ, ಭಾರತದ ಸಂವಿಧಾನ ಅಂಗೀಕಾರದ ನೆನಪಿಗಾಗಿ ನವೆಂಬರ್ ೨೬ರಂದು ದಿನಾಚರಿಸಲಾಗುತ್ತದೆ. ಪ್ರಜಾಪ್ರಭುತ್ವದ ಮೂಲಾಧಾರವೇ ಸಂವಿಧಾನ. ದೇಶದ ಪವಿತ್ರ ಗ್ರಂಥ ಇದು ಎಂದರು.

ವಿದ್ಯಾರ್ಥಿ ಅಭಿಲಾಷ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರಿಗೂ ಸಮಾನತೆ ನೀಡಿದ ದಿನ ಇದಾಗಿದೆ. ೨ ವರ್ಷ ೧೧ ತಿಂಗಳು ೧೮ ದಿನ ರಚಿಸಿದ ವಿಶ್ವದ ಅತಿದೊಡ್ಡ ಸಂವಿಧಾನ ನಮ್ಮದು ಎಂದರು.

ವಿದ್ಯಾರ್ಥಿನಿ ಭಾಗ್ಯಶ್ರೀ ಮಾತನಾಡಿ, ಸಮಾನತೆ, ಸ್ವಾತಂತ್ರö್ಯ, ವಿಚಾರ ಅಭಿವ್ಯಕ್ತಿ, ಧಾರ್ಮಿಕ ಸಹಿಷ್ಣುತೆ, ಸಂಪತ್ತಿನ ಸಮಾನ ಅಧಿಕಾರ ಸಂವಿಧಾನ ನೀಡಿದೆ ಎಂದರು. ಕಾಲೇಜಿನ ಎಲ್ಲ ಉಪನ್ಯಾಸಕರು, ಸಿಬ್ಬಂದಿ ವರ್ಗದವರಿದ್ದರು. ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ಪ್ರತಿಜ್ಞಾವಿಧಿಯ ಮೂಲಕ ಓದಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net