ಎಸ್‌ಡಿಪಿಐ ಪ್ರತಿಭಟನೆ

Published on

ಚಾಮರಾಜನಗರ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆ್ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ೈಝಿ ಅವರನ್ನು ಇಡಿ ಬಂಧಿಸಿರುವನ್ನು ವಿರೋಧಿಸಿ ನಗರದಲ್ಲಿ ಮುಖಂಡರು ಪ್ರತಿಭಟನೆ ನಡೆಸಿದರು.

ನಗರದ ಎಸ್‌ಡಿಪಿಐ ಜಿಲ್ಲಾ ಕಚೇರಿಯಿಂದ ಭುವನೇಶ್ವರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ರಾಜ್ಯ ಸಮಿತಿಯ ಸದಸ್ಯ ಅಬ್ರಾರ್ ಅಹಮದ್ ಮಾತನಾಡಿ, ದೇಶದಲ್ಲಿ ವಕ್ಫ್ ಮಸೂದೆ ವಿರುದ್ಧ ಶಕ್ತವಾದ ಹೋರಾಟ ನಡೆಯುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನಮ್ಮ ಪಕ್ಷದ ರಾಷ್ಟೀಯ ಅಧ್ಯಕ್ಷರನ್ನು ಇಡಿ ಮೂಲಕ ಅಕ್ರಮವಾಗಿ ಬಂಧಿಸಿದೆ ಎಂದು ದೂರಿದರು.

ಈ ಬಂಧನವು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ. ಕೇಂದ್ರ ಸರ್ಕಾರದ ಕೇಂದ್ರ ಸರ್ಕಾರ ತನ್ನ ಜನ ವಿರೋಧಿ ನಡೆಯಿಂದ ಹಿಂದೆ ಸರಿದು ಕೂಡಲೇ ಫೈಝಿ ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ಕಲೀಲ್ ಉಲ್ಲಾ, ಜಿಲ್ಲಾ ಉಪಾಧ್ಯಕ್ಷ ಸಿ.ಕೆ.ನಯಾಜ್ ಉಲ್ಲಾ, ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಹಾಗೂ ನಸ್ರುಲ್ಲಾ, ಕಾರ್ಯದರ್ಶಿಗಳಾದ ಜಬೀನೂರ್ ಹಾಗೂ ಸುಹೇಲ್ ಪಾಷ, ಖಜಾಂಚಿ ಸೈಯದ್ ಇರ್ಫಾನ್, ಟೌನ್ ಅಧ್ಯಕ್ಷ ಮಜರ್‌ಖಾನ್, ನಗರಸಭಾ ಸದಸ್ಯರಾದ ಮೊಹಮ್ಮದ್ ಅಮೀಕ್, ಅಪ್ಸರ್ ಪಾಷ, ಮುಖಂಡರಾದ ಇಸ್ರಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net