ಎಸ್​ಡಿಎಂಸಿ ಅಧ್ಯಕ್ಷೆ ಪತ್ನಿ ಉಪಾಧ್ಯಕ್ಷ ಪತಿ ಅಚ್ಚರಿ ಆಯ್ಕೆ

IMG-20230915-WA0056
Published on

ಚಿಂಚೋಳಿ: ತಾಲೂಕಿನ ಚಿಮ್ಮನಚೋಡ ಗ್ರಾಮದ ಸರಕಾರಿ ಪ್ರೌಢಶಾಲೆಯ 2023-24 ನೇ ಸಾಲಿನ ಶಾಲಾ ಸುಧಾರಣಾ ಸಮಿತಿ ಚುನಾವಣಾ ಜರುಗಿತು.

ನೂತನವಾಗಿ ಭಾರತಿ ಗಂಡ ಭೀಮಣ್ಣ ಗಣಾಪೂರ ಅಧ್ಯಕ್ಷರಾಗಿ ಆಯ್ಕೆಯಾದರೆ, ಪತಿ ಭೀಮಣ್ಣ  ತಂದೆ ನಾಗಪ್ಪ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಲಾಟ್ರಿ ಮೂಲಕ ಆಯ್ಕೆಯಾಗಿ ಅಚ್ಚರಿ ಮೂಡಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಮಲ್ಲಿಕಾರ್ಜುನ ರೆಡ್ಡಿ ನರನಾಳ, ಗ್ರಾ.ಪಂ ಕಾರ್ಯದರ್ಶಿ ಜಗನ್ನಾಥ ರೆಡ್ಡಿ ಚಟನಳ್ಳಿ, ಮುಖ್ಯಗುರು ಶಂಕರ ನಾಯಕ, ಖುರಷೀದಮಿಯ್ಯ, ರಾಘವೇಂದ್ರ ರೆಡ್ಡಿ, ಅಬ್ದುಲ್ ಖಾದರ್, ಕಿಶನ, ನರಸಪ್ಪ ಗಣಾಪೂರ, ಗ್ರಾ.ಪಂ ಸದಸ್ಯ ವಿಶ್ವನಾಥ ರೆಡ್ಡಿ, ಪ್ರಕಾಶ್, ಜಗನ್ನಾಥ ಹೊಸಮನಿ, ಬಾಬುಮಿಯ್ಯ, ಮಹ್ಮದ ಖುರೇಷಿ, ಸಂತೋಷ ಗೌನಳ್ಳಿ, ರೇವಣಸಿದ್ದ ನಾಟಿಕಾರ, ಗೋಪಾಲ ಬಾಜೆಪಲ್ಲಿ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net