

ಕಲಬುರಗಿ: ಎಸ್‌ಟಿ ಮೀಸಲು ಎಂಬುದು ಸರ್ಕಾರದಿಂದ ಸೌಲಭ್ಯ ಪಡೆಯುವ ಅಸ್ತçವೇ ಹೊರತು, ಕೀಳರಿಮೆಯಲ್ಲ. ಅದನ್ನು ಜಾತಿ, ಸ್ವಾಮೀಜಿ, ವ್ಯಕ್ತಿಯನ್ನು ನೋಡಿ ಕೊಡುವುದಿಲ್ಲ. ಕುಲಕಸುಬು, ಸ್ಥಿತಿ ಗತಿ ನೋಡಿ ಎಸ್‌ಟಿ ಮೀಸಲು ನೀಡಲಾಗುತ್ತದೆ. ಅದಕ್ಕಾಗಿ ಸಂಘಟಿತ ಹೋರಾಟ ಮಾಡಬೇಕು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಡಿ ಹೇಳಿದರು.
ನಗರದ ಡಾ.ಎಸ್.ಎಂ.ಪAಡಿತ ರಂಗಮAದಿರದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದಿಂದ ಸೋಮವಾರ ಆಯೋಜಿಸಿದ್ದ ಅಖಿಲ ಕರ್ನಾಟಕ ವಿಶ್ವಕರ್ಮ ಮಠಾಧಿಪತಿಗಳ ಮತ್ತು ಸ್ವಾಮೀಜಿಗಳ ರಾಜ್ಯಮಟ್ಟದ ಸಂಘಟನಾ ವೇದಿಕೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಪರಿಶಿಷ್ಟ ಪಂಗಡ ಸೇರ್ಪಡೆ ಎಂಬುದು ಸಮಾಜದ ಉಳಿವಿನ ಪ್ರಶ್ನೆ. ಸಾಮಾಜಿಕ ನ್ಯಾಯ ದೊರೆಯದೇ ಉದ್ದಾರವಾಗಲ್ಲ. ನಾವು ಬ್ರಾಹ್ಮಣರಲ್ಲ. ಆ ಶ್ರೇಷ್ಠತೆ ಇರಲಿ ಎಂದು ಹೇಳಿದರು.
ಸಂಸದ ಡಾ.ಉಮೇಶ ಜಾಧವ್ ಮಾತನಾಡಿ, ಹಲವು ಸಮಸ್ಯೆಗಳಿದ್ದು, ಬುದ್ಧಿವಂತಿಕೆ, ಕಲೆ ವಿಶ್ವಕರ್ಮರಲ್ಲಿದೆ. ದೇಶದ ಎಲ್ಲ ದೇವಸ್ಥಾನ ಕಟ್ಟಿದ್ದವರು ವಿಶ್ವಕರ್ಮರು. ದೇವರು ಬಿಡುವುದಿಲ್ಲ. ಎಲ್ಲರ ಜತೆಗೆ ಇರುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಸಣ್ಣ ಸಣ್ಣ ಸಮಾಜದೊಂದಿಗೆ ಇದ್ದಾರೆ ಎಂಬ ಸಂದೇಶ ನೀಡಿದ್ದಾರೆ. ಕೆಲವು ನಾಚಿಕೆಗೇಡಿಗಳು ಸನಾತನ ಧರ್ಮ ನಾಶ ಮಾಡಬೇಕು ಎನ್ನುತ್ತಿದ್ದಾರೆ. ಆದರೆ ಸ್ವಾಮೀಜಿಗಳು ಧರ್ಮದ ಸಂಸ್ಕೃತಿ, ಸಂಸ್ಕಾರ ಉಳಿಸುತ್ತಿ ಎಂದರು.
ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಮಾತನಾಡಿ, ವಿಶ್ವಕರ್ಮ ಐತಿಹಾಸಿಕ, ದೇವಸ್ವರೂಪಿ ಸಮಾಜವಾಗಿದೆ. ಶಿಲ್ಪಿ, ಬಡಿಗತನ, ಆಭರಣ ಸೇರಿ ವೈವಿಧ್ಯಮಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ, ಪ್ರೀತಿ, ಒಡನಾಟ ಹೊಂದಿದ ಸಮಾಜ ವಿಶ್ವಕರ್ಮ ಎಂದರು.
ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ವಿಶ್ವಕರ್ಮ ಸಮಾಜಕ್ಕೆ ಸೂಕ್ತ ನ್ಯಾಯ ಸಿಗಬೇಕು. ಅನ್ಯಾಯವಾಗಿದ್ದು, ಸೂಕ್ತ ಸ್ಥಾನ ಮಾನ ಕೊಡಿಸಲು ಶ್ರಮಿಸುತ್ತೇವೆ. ವಿಶ್ವಕರ್ಮ ಸಣ್ಣ ಸಮಾಜವಲ್ಲ, ಅದರ ಕೊಡುಗೆ ಅಪಾರವಾಗಿದೆ. ಎಲ್ಲರನ್ನು ಜತೆಗೆ ಕರೆದುಕೊಂಡು ಹೋಗಲಾಗುವುದು ಎಂದರು.
ಶ್ರೀ ಡಾ.ಚನ್ನರುದ್ರಮುನಿ ಶಿವಾಚಾರ್ಯರು ಮಾತನಾಡಿ, ವಚನ ಪಚನ ಮಾಡಿಕೊಂಡರೆ e್ಞÁನ ದೊರೆಯುತ್ತದೆ. ಪ್ರe್ಞÁವಂತರಾಗಿ ಬೆಳೆಯಬೇಕು. ಸಮಾಜಕ್ಕಾಗಿ ಮೊದಲು ಕೆಲಸ ಮಾಡಿ. ನಮ್ಮ ಕೂಗು ವಿಧಾನಸೌಧಕ್ಕೆ ತಲುಪಬೇಕು. ಸರ್ಕಾರದ ಕಿವಿ ಮಂದ ಇರುತ್ತವೆ. ನಮ್ಮ ಧ್ವನಿ ಜೋರಾದಾಗ ಎಚ್ಚರ ಆಗುತ್ತಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ.ಪಾಟೀಲ್ ಮಾತನಾಡಿದರು. ಶ್ರೀ ದೊಡ್ಡೇಂದ್ರ ಸ್ವಾಮೀಜಿ ಪ್ರಾಸ್ತಾವಿಕ ಮಾತನಾಡಿದರು. ಶ್ರೀ ನಾಗಮೂರ್ತೇಂದ್ರ ಸ್ವಾಮೀಜಿ, ಶ್ರೀ ಗುರುನಾಥ ಸ್ವಾಮೀಜಿ, ಶ್ರೀ ಪ್ರಣವನಿರಂಜನ ಸ್ವಾಮೀಜಿ, ಶ್ರೀ ಗಣೇಶ್ವರ ಸ್ವಾಮೀಜಿ, ಶ್ರೀ ಸುರೇಂದ್ರ ಸ್ವಾಮೀಜಿ, ಶ್ರೀ ಉತ್ತಪ್ಪ ತಾತ, ಶ್ರೀ ಡಾ.ಮಲ್ಲಣಪ್ಪ ಸ್ವಾಮೀಜಿ, ಶ್ರೀ ಅಪ್ಪಣ್ಣವೀರದೇವರು ಸೇರಿ ವಿವಿಧ ಪೂಜ್ಯರು ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಅವ್ವಣ್ಣ ಮ್ಯಾಕೇರಿ, ಐ.ಸಿ.ಪಂಚಾಳ, ಲೋಹಿತ ಕಲ್ಲೂರ, ಅಶೋಕ ಪೋದ್ದಾರ, ಚಿತ್ರಲೇಖ ಟೆಂಗಳಿಕರ್, ಕಮಲಾಕರ ಪಂಚಾಳ, ಹಣಮಂತರಾವ ವಿಶ್ವಕರ್ಮ, ಸುನೀಲ ಕೆ.ದಿಕ್ಸಂಗಿ ಇತರರಿದ್ದರು.