ಚಿತ್ರದುರ್ಗ: ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯಕ್ಕೆ ನ್ಯಾಕ್ ಕಮಿಟಿ ಬಿ++ ಶ್ರೇಣಿ ಮಾನ್ಯತೆ ನೀಡಿದೆ ಹಾಗೂ 2ನೇ ಆವೃತ್ತಿ ಮಾನ್ಯತೆಯನ್ನು 5 ವರ್ಷಗಳ ಅವಧಿಯವರೆಗೆ ವಿಸ್ತರಿಸಿದೆ. ನ್ಯಾಕ್ ಮಾನ್ಯತೆ ವಿಸ್ತರಣೆ ಸಂಬಂಧ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆಂದು ಪ್ರಾಚಾರ‌್ಯ ಡಾ.ಪಿ.ಬಿ. ಭರತ್ ತಿಳಿಸಿದ್ದಾರೆ.