

ಚಿತ್ರದುರ್ಗ: ಎಸ್‌ಜೆಎಂ ವಿದ್ಯಾಪೀಠದ ಹಲವು ಶಾಲಾ-ಕಾಲೇಜುಗಳಲ್ಲಿ ಬುಧವಾರ ಕರ್ನಾಟಕ ರಾಜ್ಯೋತ್ಸವ ಸಂಭ್ರಮದಿಂದ ಆಚರಿಸಲಾಯಿತು.
ಚಂದ್ರವಳ್ಳಿ ಎಸ್‌ಜೆಎಂ ಕಾಲೇಜು: ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸುವ ಮೂಲಕ ಕಾಲೇಜಿನ ಕನ್ನಡ ವಿಭಾಗದಿಂದ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಪ್ರಾಚಾರ್ಯ ಡಾ.ಎಸ್.ಎಚ್.ಪಂಚಾಕ್ಷರಿ, ವಿಭಾಗದ ಮುಖ್ಯಸ್ಥ ಪ್ರೊ.ಜಿ.ಎನ್.ಬಸವರಾಜಪ್ಪ, ಪ್ರೊಫೆಸರ್ಸ್‌ಗಳಾದ ಎಲ್.ಶ್ರೀನಿವಾಸ್, ಆರ್.ಕೆ.ಕೇದಾರನಾಥ್, ಎಚ್.ಎಂ.ಮಂಜುನಾಥಸ್ವಾಮಿ, ಬಿ.ಎಂ.ಸ್ವಾಮಿ, ಬಿ.ನಾಗರಾಜ್, ವೆಂಕಟೇಶ್, ಟಿ.ಎನ್.ರಜಪೂತ್, ವಿ.ಎಸ್.ನಳಿನಿ, ಎನ್.ಚಂದಮ್ಮ, ಡಾ.ಹರ್ಷವರ್ಧನ್, ಡಾ.ನಾಜೀರುನ್ನಿಸಾ, ಡಾ.ಬಿ.ರೇವಣ್ಣ ಇತರರಿದ್ದರು.
ಎಸ್‌ಜೆಎಂಐಟಿ: ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಜ್ಯೋತ್ಸವ ಆಚರಿಸಲಾಯಿತು. ಪ್ರಾಂಶುಪಾಲ ಡಾ.ಪಿ.ಬಿ.ಭರತ್, ಡಾ.ಕೆ.ಕುಮಾರಸ್ವಾಮಿ ಇತರರಿದ್ದರು.
ಪಾಲಿಟೆಕ್ನಿಕ್: ಎಸ್‌ಜೆಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರಾಜ್ಯೋತ್ಸವ ಆಚರಿಸಲಾಯಿತು. ಗ್ರಂಥಪಾಲಕ ಎಂ.ವೀರಯ್ಯ, ಕಚೇರಿ ಮುಖ್ಯಸ್ಥ ಲಿಂಗರಾಜು, ಕೆ.ಸುರೇಶ್, ಎಂ.ಜೆ.ರುದ್ರಮೂರ್ತಿ, ಜಿ.ಎಸ್.ಗುರುನಾಥ್, ಸೋಮಶೇಖರಪ್ಪ ಮಾಶ್ಯಾಳ್, ಗೋಪಿನಾಥ್, ನಿರಂಜನಪ್ರಭು ಇದ್ದರು.