ಎಸ್‌ಜೆಎಂ ಪದವಿ ಕಾಲೇಜಿಗೆ ನ್ಯಾಕ್ ಮಾನ್ಯತೆ

ctd-sjm---
Published on

ಚಿತ್ರದುರ್ಗ: ನಗರದ ಎಸ್‌ಜೆಎಂ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯಕ್ಕೆ ನ್ಯಾಕ್ 4ನೇ ಮರುಮೌಲ್ಯೀಕರಣ ಪರಿಶೀಲನೆಯಲ್ಲಿ ಕಾಲೇಜಿಗೆ ಬಿ++ ಗ್ರೇಡ್(ಸಿಜಿಪಿಎ-2.90) ಮಾನ್ಯತೆ ಲಭಿಸಿದೆ ಎಂದು ಪ್ರಾಚಾರ್ಯ ಡಾ.ಎಸ್.ಎಚ್. ಪಂಚಾಕ್ಷರಿ ತಿಳಿಸಿದ್ದಾರೆ. ನ್ಯಾಕ್ ಸಮಿತಿ ಡಿ.19, 20ರಂದು ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿತ್ತು. ಕಾಲೇಜಿಗೆ ನ್ಯಾಕ್ ಉತ್ತಮ ಗ್ರೇಡ್ ದೊರಕಿರುವುದಕ್ಕೆ ಮುರುಘಾಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ, ಸದಸ್ಯರಾದ ಡಾ. ಶ್ರೀ ಬಸವಕುಮಾರ ಸ್ವಾಮೀಜಿ, ಡಾ. ಪಿ.ಎಸ್. ಶಂಕರ್, ಎಸ್.ಎನ್. ಚಂದ್ರಶೇಖರ್ ಇತರರು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net