ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಹಾರ ಮೇಳ

CTD 30 FOOD--004
Published on

ಚಿತ್ರದುರ್ಗ:ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ಸ್ಫೂರ್ತಿ-2024’ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವದ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಆಹಾರಮೇಳದಲ್ಲಿ ವಿದ್ಯಾರ್ಥಿಗಳೇ ತಯಾರಿಸಿದ ಪುಳಿಯೊಗರೆ, ಪಾನಿಪೂರಿ, ವಡಾಪಾವ್, ಮಂಡಕ್ಕಿ ಮೆಣಸಿನಕಾಯಿ,ಗೊಜ್ಜವಲಕ್ಕಿ, ಪಾನಿಯಗಳಾದ ಕೋಕಂ, ನನ್ನಾರಿ ಇತ್ಯಾದಿ ತಿಂಡಿ ತಿನಿಸುಗಳನ್ನು ವೀಕ್ಷಕರು ಸವಿದರು. ಮೇಳವನ್ನು ಪ್ರಾಚಾರ್ಯ ಡಾ.ಪಿ.ಬಿ.ಭರತ್ ಉದ್ಘಾಟಿಸಿ ದರು.ತೀರ್ಪುಗಾರರಾಗಿ ಕೆ.ಸಿ.ವೀಣಾ ಆಗಮಿಸಿದ್ದರು.ಡಾ.ಬಿ.ಜಿ. ಕುಮಾರಸ್ವಾಮಿ, ಡಾ.ಬಿ.ಜಿ.ದೇವಿಕಾ, ಡಾ.ಇ.ನಿರಂಜನ್, ಪ್ರೊ.ಎಂ.ಕೆ.ಸುದರ್ಶನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net