ಎಸ್​ಎಸ್​ಕೆ ಸಮಾಜದಿಂದ ಸನ್ಮಾನ

h14-SSK yuva
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಸಹಸ್ರಾರ್ಜುನ ಮಹಾರಾಜರ ಬಳಗ ಹಾಗೂ ಎಸ್​ಎಸ್​ಕೆ ಸಮಾಜದ ವತಿಯಿಂದ ಶಾಸಕ ಮಹೇಶ ಟೆಂಗಿನಕಾಯಿ ಅವರನ್ನು ಹುಬ್ಬಳ್ಳಿಯಲ್ಲಿ ಸೋಮವಾರ ಸನ್ಮಾನಿಸಲಾಯಿತು.

ಶಾಸಕ ಟೆಂಗಿನಕಾಯಿ ಅವರು ಇತ್ತೀಚೆಗೆ ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನದಲ್ಲಿ ಎಸ್​ಎಸ್​ಕೆ ನಿಗಮ ರಚನೆಗೆ ಸರ್ಕಾರವನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಎಸ್​ಎಸ್​ಕೆ ಸಮಾಜದ ಯುವಕರ ವತಿಯಿಂದ ಮಾಜಿ ಮೇಯರ್ ಡಿ. ಕೆ. ಚವ್ಹಾಣ, ಮುಖಂಡ ಲಕ್ಷ್ಮಣ ದಲಬಂಜನ ಸನ್ಮಾನಿಸಿದರು.

ಸಮಾಜದ ಯುವ ನಾಯಕ ವೆಂಕಟೇಶ ಕಾಟವೆ, ಮಿಥುನ ಚವ್ಹಾಣ, ಪ್ರವೀಣ ಪವಾರ, ಅಮೃತ ಕಲ್ಪವೃಕ್ಷ, ಸುಭಾಷ ಬದ್ದಿ, ರಮೇಶ ಪೂಜಾರಿ, ಮಂಜು ಪವಾರ, ಕಿರಣ ಲದವಾ, ನಿಖಿಲ್ ಖೋಡೆ, ನಾರಾಯಣ ಹಬೀಬ, ದೀಪಕ ಜಿತೂರಿ, ಮನೋಹರ ಕಟಾರೆ, ಮಂಜು ಊಟವಾಲೆ, ಅಭಿಷೇಕ ಚವ್ಹಾಣ, ದರ್ಶನ ಚವ್ಹಾಣ, ಶ್ರೀಧರ ಇರಕಲ್ಲ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net