ಎಸ್‌ಎಸ್‌ಎಲ್‌ಸಿ ಸಾಧಕರಿಗೆ ಸನ್ಮಾನ

3MGKD1
Published on

ಮುಗಳಖೋಡ: ಪಟ್ಟಣದ ಬ.ನಿ.ಕುಲಿಗೋಡ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೮೪.೦೪ ಸಾಧನೆ ಮಾಡಿದೆ. ಮಧುರಾ ಮಗದುಮ್ಮ ೬೨೨ (ಶೇ.೯೯.೫೨) ಅಂಕ ಪಡೆದು ಪ್ರಥಮ, ಕಾವೇರಿ ಮೂಶಿ ೬೧೩ (ಶೇ.೯೮.೦೮) ಅಂಕ ಪಡೆದು ದ್ವಿತೀಯ, ಲಕ್ಷ್ಮಿಭಾಯಿ ಸಪ್ತಸಾಗರ ೬೧೧ (ಶೇ.೯೭.೭೬) ಅಂಕ ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ. ೧೯೪ ವಿದ್ಯಾರ್ಥಿಗಳ ಪೈಕಿ ೧೬೩ ಜನ ತೇರ್ಗಡೆ ಹೊಂದಿದ್ದಾರೆ ಎಂದು ನಿಕಟಪೂರ್ವ ಅಧ್ಯಕ್ಷ ಡಾ. ಸಿ.ಬಿ. ಕುಲಿಗೋಡ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net