ಎಸ್‌ಎಸ್‌ಎಲ್‌ಸಿ ಕೊಠಡಿ ಮೇಲ್ವಿಚಾರಕರ ಕಾರ್ಯಕ್ಕೆ ಬಳಕೆ ಬೇಡ

SSLC, Room Supervisor, Primary School Teachers Association, Indi,
ಇಂಡಿ ತಾಲೂಕು ಬಿಇಒ ಬಿ.ಎಸ್.ಆಲಗೂರ ಅವರಿಗೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಮನವಿ ಸಲ್ಲಿಸಲಾಯಿತು. ಎಸ್.ವಿ. ಹರಳಯ್ಯ, ಮಲ್ಲಿಕಾರ್ಜುನ ನೆದಲಗಿ, ವೈ.ಟಿ.ಪಾಟೀಲ, ಸಿ.ಎಸ್. ಝಳಕಿ ಇತರರಿದ್ದರು.
Published on

ಇಂಡಿ: ಎಸ್‌ಎಸ್‌ಎಲ್‌ಸಿ ಕೊಠಡಿ ಮೇಲ್ವಿಚಾರಕರ ಕಾರ್ಯಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಬಳಸಿಕೊಳ್ಳಬಾರದು ಎಂದು ಇಂಡಿ ತಾಲೂಕಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಆಲಗೂರ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿದ್ದು, ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮೇಲ್ವಿಚಾರಕ ಕಾರ್ಯ ಮಾಡಬೇಕೆಂದು ಮಾನ್ಯ ಆಯುಕ್ತರು ಆದೇಶ ಮಾಡಿದ್ದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಯಾವಾಗಲೂ ಇಲಾಖೆಯ ಕಾರ್ಯ ಮಾಡುವಲ್ಲಿ ಸ್ವಾಗತ ಬಯಸುತ್ತದೆ. ಆದರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕೊಠಡಿ ಮೇಲ್ವಿಚಾರಕರು ಅಂತ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಿಸಿ ಆದೇಶ ಮಾಡಿದ್ದು ಸಂಘ ಬಲವಾಗಿ ಖಂಡಿಸುತ್ತಿದೆ.ಆದ್ದರಿಂದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸದರಿ ಕಾರ್ಯದಿಂದ ಬಿಡುಗಡೆ ಮಾಡಲು ಕೋರುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ. ಹರಳಯ್ಯ, ಕಾರ್ಯದರ್ಶಿ ಮಲ್ಲಿಕಾರ್ಜುನ ನೆದಲಗಿ, ವೈ.ಟಿ. ಪಾಟೀಲ, ಸಿ.ಎಸ್. ಝಳಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net