ಪಿಎಫ್‌ಐ, ಸಿಎಫ್‌ಐ ಸಂಘಟನೆಯಲ್ಲಿ ಇದ್ದವರಿಗೆ ಇದರಲ್ಲಿ ಅವಕಾಶವಿಲ್ಲ. ಅದರ ಹೊರತಾಗಿ ಇರುವಂತಹ ವಿದ್ಯಾರ್ಥಿಗಳನ್ನು ಸಂಘಟಿಸಲಾಗುತ್ತಿದೆ. ಈ ಮೂಲಕ ಮಕ್ಕಳಲ್ಲಿ ಶೈಕ್ಷಣಿಕ ಮತ್ತು ನೈತಿಕ ಪ್ರಜ್ಞೆ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಮುಸ್ಲಿಂ ವಿದ್ಯಾರ್ಥಿಗಳ ಸಂಘಟನೆ ಮಾತ್ರವಲ್ಲ, ಯಾವುದೇ ಸಮುದಾಯವಿರಲಿ ಸಾಮಾಜಿಕ ಅನ್ಯಾಯಕ್ಕೆ ಒಳಗಾದರೆ ಸಂವಿಧಾನದಡಿಯಲ್ಲಿ ಹೋರಾಟಕ್ಕೂ ಎಸ್‌ಎಸ್‌ಎಫ್ ಸಿದ್ಧವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಎಸ್‌ಎಸ್‌ಎಫ್ ಸದಸ್ಯ ಕೆ.ಕೆ.ಅಶ್ರಫ್, ಸಖಾಫಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಮುತ್ತು, ಕೋಶಾಧಿಕಾರಿ ಶರೀಫ್ ಸಖಾಫಿ, ಕಾರ್ಯದರ್ಶಿ ಜನಾಬ್ ಸುಹೈಲ್ ಇದ್ದರು.