

ಚಿತ್ರದುರ್ಗ: ಸುತ್ತ ಮುತ್ತಲಿನ ನಾಲ್ಕಕ್ಕಿಂತ ಅಧಿಕ ಜಿಲ್ಲೆಗಳಲ್ಲೇ ಚಿತ್ರದುರ್ಗ ಮತ್ತು ಚಳ್ಳಕೆರೆ ಎಸ್‌ಆರ್‌ಎಸ್ ಹೆರಿಟೇಜ್ ಶಾಲೆ ಸತತ 8ನೇ ವರ್ಷವೂ ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ದಾಖಲಿಸಿ ಜಿಲ್ಲೆಗೆ ಕೀರ್ತಿ ತಂದಿದೆ.
ಶಾಲೆಯ ವಿದ್ಯಾರ್ಥಿಗಳಾದ ಧವನ್ ಎಸ್. ರೆಡ್ಡಿ(ಶೇ.99), ಕೆ.ಜೆ. ವಿನಯ್(ಶೇ.96), ಎಸ್.ಆರ್. ಪ್ರಿಯಾಂಕಾ (ಶೇ.95.4), ಆರ್. ಮಂಜುನಾಥ್(ಶೇ.95), ಸಾನಿಕಾ ಟಿ. ಮೂರ್ತಿ (ಶೇ.95)ಅಂಕಗಳನ್ನು ಪಡೆದಿದ್ದಾರೆ.
86 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಶಿಕ್ಷಕರ ಪರಿಶ್ರಮಕ್ಕೆ ವಿದ್ಯಾರ್ಥಿಗಳು ಹಾಗೂ ಪಾಲಕರು ಧನಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಫಲಿತಾಂಶ ಶಾಲೆ ಹೆಸರನ್ನು ಜಿಲ್ಲಾ ಮಟ್ಟದಲ್ಲಿ ರಾರಾಜಿಸುವಂತೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಕಾರ್ಯದರ್ಶಿ ಸುಜಾತಾ ಲಿಂಗಾರೆಡ್ಡಿ, ಉಪಾಧ್ಯಕ್ಷ ಬಿ.ಎಲ್. ಅಮೋಘ್, ಆಡಳಿತಾಧಿಕಾರಿ ಡಾ.ರವಿ, ಪ್ರಾಚಾರ್ಯರಾದ ಪ್ರಭಾಕರ್, ಬಿ.ಎಸ್. ವಿಜಯ್ ಹರ್ಷ ವ್ಯಕ್ತಪಡಿಸಿದ್ದಾರೆ.