ಎಸ್.ವಿ.ಜಿ. ಕೊತ್ತತ್ತಿ ಶಾಲೆ ಪ್ರಥಮ

17-pnp 2
Published on

ಪಾಂಡವಪುರ: ತಾಲೂಕಿನ ಪಿಎಸ್‌ಎಸ್‌ಕೆ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಥ್ರೋಬಾಲ್ ಪಂದ್ಯಾವಳಿಯನ್ನು ಶಾಸಕ ಸಿ.ಎಸ್.ಪುಟ್ಟರಾಜು ಶನಿವಾರ ಉದ್ಘಾಟಿಸಿದರು.

ಪಂದ್ಯಾವಳಿಯಲ್ಲಿ ಮಂಡ್ಯ, ಪಾಂಡವಪುರ, ನಾಗಮಂಗಲ, ಶ್ರೀರಂಗಪಟ್ಟಣ, ಮದ್ದೂರು, ಮಳವಳ್ಳಿ ಹಾಗೂ ಕೆ.ಆರ್.ಪೇಟೆ ತಾಲೂಕಿನ ಸುಮಾರು 36 ತಂಡಗಳು ಭಾಗವಹಿಸಿದ್ದವು. ಪಿಎಸ್‌ಎಸ್‌ಕೆ ವ್ಯವಸ್ಥಾಪಕ ನಿರ್ದೇಶಕ ವಿಕ್ರಮ ರಾಜೇಅರಸ್ ಧ್ವಜಾರೋಹಣ ನೆರವೇರಿಸಿ ಕ್ರೀಡಾ ತಂಡಗಳಿಂದ ವಂದನೆ ಸ್ವೀಕರಿಸಿದರು. ಕಾಲೇಜಿನ ಕಾರ್ಯದರ್ಶಿ ನಂದೀಶ್ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಕೆನ್ನಾಳು ಗ್ರಾಪಂ ಆಧ್ಯಕ್ಷ ಶ್ವೇತಾ ಸುರೇಶ್, ದೈಹಿಕ ಶಿಕ್ಷಣ ಶಿಕ್ಷಕರಾದ ಬಸವರಾಜು, ಮಂಜುನಾಥ್, ನಂದೀಶ್, ಶಿಕ್ಷಕರಾದ ಕೇಶವಮೂರ್ತಿ, ಗಡ್ಡ ಚಂದ್ರಶೇಖರ್, ಮಮತಾ ಇತರರು ಇದ್ದರು.

ವಿಜೇತ ತಂಡಗಳ ವಿವರ: 14 ವರ್ಷ ವಯೋಮಾನದ ಬಾಲಕರ ವಿಭಾಗ- ಎಸ್.ವಿ.ಜಿ.ಎಚ್.ಪಿ.ಎಸ್ ಕೊತ್ತತ್ತಿ (ಮಂಡ್ಯ ಗ್ರಾಮಾಂತರ) ಪ್ರಥಮ, ಕಾರ್ಮೆಲ್ ಕಾನ್ವೆಂಟ್ ಮಂಡ್ಯ(ದ್ವಿತೀಯ), ಬಾಲಕಿಯರ ವಿಭಾಗ- ಎಸ್.ವಿ.ಜಿ.ಎಚ್.ಪಿ.ಎಸ್ ಕೊತ್ತತ್ತಿ (ಮಂಡ್ಯ ಗ್ರಾಮಾಂತರ) ಪ್ರಥಮ, ಗ್ರಾಮಭಾರತಿ ಆಂಗ್ಲ ಮಾಧ್ಯಮ ಶಾಲೆ ಕೆ.ಆರ್.ಪೇಟೆ- ದ್ವಿತೀಯ ಬಹುಮಾನ ಪಡೆದುಕೊಂಡರು.
17 ವರ್ಷದೊಳಗಿನ ಬಾಲಕರ ವಿಭಾಗ: ಎಸ್.ವಿ.ಜಿ.ಎಚ್.ಪಿ.ಎಸ್ ಕೊತ್ತತ್ತಿ (ಮಂಡ್ಯ ಗ್ರಾಮಾಂತರ)-ಪ್ರಥಮ, ಶ್ರೀ ಚನ್ನಕೇಶವಸ್ವಾಮಿ ಪ್ರೌಢಶಾಲೆ ಕೊರಟಗೆರೆ-ದ್ವಿತೀಯ ಸ್ಥಾನ ಗಳಿಸಿತು. ಬಾಲಕಿಯರ ವಿಭಾಗ- ಎಸ್.ವಿ.ಜಿ.ಎಚ್.ಪಿ.ಎಸ್ ಕೊತ್ತತ್ತಿ (ಮಂಡ್ಯ ಗ್ರಾಮಾಂತರ)-ಪ್ರಥಮ, ಆದರ್ಶ ವಿದ್ಯಾಲಯ, ಮಳವಳ್ಳಿ-ದ್ವಿತೀಯ ಸ್ಥಾನ ಪಡೆಯಿತು. ಎಲ್ಲ ವಿಭಾಗದಲ್ಲೂ ಎಸ್.ವಿ.ಜಿ.ಎಚ್.ಪಿ.ಎಸ್ ಕೊತ್ತತ್ತಿ (ಮಂಡ್ಯ ಗ್ರಾಮಾಂತರ) ಶಾಲಾ ತಂಡ ಪ್ರಥಮ ಬಹುಮಾನ ಗಿಟ್ಟಿಸಿಕೊಂಡಿದ್ದು ವಿಶೇಷವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net