ಕೂಡಲೇ ಬಸ್ ಪ್ರಯಾಣದರ ಇಳಿಸಿ

SUCI
Published on

ಯಾದಗಿರಿ: ದೇಶದಲ್ಲಿನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆಲೆ ಏರಿಕೆಯಿಂದ ಶ್ರೀಸಾಮಾನ್ಯ ತತ್ತರಿಸುತ್ತಿದ್ದು, ಇದಕ್ಕೆ ಕೇಂದ್ರ ಸರ್ಕಾರದ ಬೇಜವಾಬ್ದಾರಿ ಕಾರಣ ಎಂದು ಆರೋಪಿಸಿ ಗುರುವಾರ ಎಸ್ ಯುಸಿಐ ಪಕ್ಷದಿಂದ ಯಾದಗಿರಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಸುಭಾಷ್ಚಂದ್ರ ಬೋಸ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರದಗಳ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾ ಕಾರ್ಯದರ್ಶಿ ಕೆ.ಸೋಮಶೇಖರ್ ಮಾತನಾಡಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಪ್ರಯಾಣ ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿ, ಬಡ ಜನರ ಹೊಟ್ಟೆಯ ಮೇಲೆ ಮತ್ತೊಂದು ಬರೆ ಹಾಕಿರುವ ರಾಜ್ಯ ಸಕರ್ಾರದ ನಿಧರ್ಾರ ಖಂಡನಾರ್ಹ. ಕೂಡಲೇ ಸಕರ್ಾರ ಪ್ರಯಾಣದರ ಏರಿಕೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಒಂದೆಡೆಯಲ್ಲಿ, ಕೇಂದ್ರ ಸಕರ್ಾರ ನಿರಂತರವಾಗಿ ಪೆಟ್ರೋಲ್-ಡೀಸೆಲ್ ದರ ಏರಿಕೆ ಮಾಡುತ್ತಿದೆ. ರೈಲು ಪ್ರಯಾಣ ದರ ಏರಿಸಿದೆ. ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರಿಸಿದೆ. ಆ ಮೂಲಕ ಜನ ಸಾಮಾನ್ಯರ ಬೆನ್ನಿನ ಮೇಲೆ ಒಂದಾದ ಮೇಲೊಂದರಂತೆ ದೊಡ್ಡ ದೊಡ್ಡ ಬರೆಗಳನ್ನು ಎಳೆದಿದೆ. ಇನ್ನೊಂದೆಡೆ, ರಾಜ್ಯ ಸರ್ಕಾರದ ಹಾಲಿನ ದರ ಏರಿಸಿದೆ. ಪಡಿತರ ಅಂಗಡಿಗಳಲ್ಲಿ ವಿತರಿಸುತ್ತಿರುವ ವಿವಿಧ ಸಬ್ಸಿಡಿ ಆಹಾರ ದಾನ್ಯಗಳನ್ನು ಕಡಿತ ಮಾಡಿದೆ. ಬಿಪಿಎಲ್ ಕುಟುಂಬದ ಪ್ರತಿ ವ್ಯಕ್ತಿಗೆ ವಿತರಿಸುತ್ತಿದ್ದ 7 ಕೆ.ಜಿ. ಅಕ್ಕಿಯಲ್ಲಿ 2 ಕೆ.ಜಿ. ಕಡಿತ ಮಾಡುವುದಾಗಿ ಪ್ರಕಟಿಸಿದೆ ಎಂದು ಹರಿಹಾಯ್ದರು.

ರಾಜ್ಯ ಸರ್ಕಾರದ ಕೂಡಲೇ ಬಸ್ ಪ್ರಯಾಣದರ ಇಳಿಸಬೇಕು, ಅಕ್ಕಿಯಲ್ಲಿ 2ಕೆಜಿ ಕಡಿತ ಮಾಡುವುದನ್ನು ಕೈಬಿಡಬೇಕು. ಹಾಲಿನ ದರವನ್ನು ಬಡವರು ಕೊಂಡುಕೊಳ್ಳುವ ದರದಲ್ಲಿ ಮಾರಬೇಕು. ಕೇಂದ್ರ ಸರ್ಕಾರದ ರಿಯಾಯಿತಿ ಅಡುಗೆ ಅನಿಲದ ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಡಿ.ಉಮಾದೇವಿ, ರಾಮಲಿಂಗಪ್ಪ ಬಿ.ಎನ್, ಸೈದಪ್ಪ ಹೆಚ್.ಪಿ., ಸುಭಾಷ್ಚಂದ್ರ ಬಿ.ಕೆ., ಸಿಂಧು ಬಿ., ಜಮಾಲ್ಸಾಬ್, ನಾಗರಾಜ, ಮಲ್ಲಮ್ಮ, ಸಾಬಮ್ಮ, ಲಕ್ಷ್ಮಮ್ಮ, ದೇವಕಮ್ಮ, ನಜೀರಾಬೇಗಂ, ಅಮೀನಾಬೇಗಂ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net