ಎಸ್.ಜಯಣ್ಣ ಅಗಲಿಕೆ ಕ್ಷೇತ್ರಕ್ಕೆ ತುಂಬಲಾರದ ನಷ್ಟ

Published on

ಚಾಮರಾಜನಗರ : ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಹಾಗೂ ಮಾಜಿ ಶಾಸಕ ದಿ.ಎಸ್.ಜಯಣ್ಣ ಅವರ ಅಕಾಲಿಕ ಮರಣ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕರ್ನಾಟಕ ಬಿಕ್ಕುಮಹಾಸಂಘದ ಕಾರ್ಯದರ್ಶಿ ಡಾ.ಕಲ್ಯಾಣಸಿರಿ ಬಂತೇಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಎಸ್.ಜಯಣ್ಣ ಅಭಿಮಾನಿ ಬಳಗದ ವತಿಯಿಂದ ಶನಿವಾರ ಆಯೋಜಿಸಿದ್ದ ದಿ.ಎಸ್.ಜಯಣ ್ಣಸ್ಮರಣಾಂಜಲಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಮಾಜಿ ಶಾಸಕ ಎಸ್.ಜಯಣ್ಣ ಅವರು ತಮ್ಮ ಬದುನುದ್ದಕ್ಕೂ ಅಂಬೇಡ್ಕರ್, ಬುದ್ದಮಾರ್ಗದಲ್ಲಿ ನಡೆದರು. ಕ್ಷೇತ್ರದ ಶಾಸಕರಾಗಿ ಹಲವಾರು ಅಭಿವೃದ್ದಿ ಕಾರ್ಯಗಳನ್ನು ನೆರವೇರಿಸಿ ಜನಮಾನಸದಲ್ಲಿ ಅಜರರಾಮರಾಗಿದ್ದಾರೆ. ಅವರ ಅಕಾಲಿಕ ಮರಣ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಪ್ರತಿಯೊಬ್ಬರು ಭಗವಾನ್ ಬುದ್ದನ ಮಾರ್ಗದಲ್ಲಿ ನಡೆಯುವ ಮೂಲಕ ತಮ್ಮ ಬದುಕುಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮುಖಂಡರಾದ ನಲ್ಲೂರುಸೋಮೇಶ್ವರ್ ಮಾತನಾಡಿ, ಜಯಣ್ಣ ಅವರು ಎಲ್ಲರ ಜತೆ ಆತ್ಮೀಯವಾಗಿ ಬೆರೆಯುವ ಸ್ವಭಾವ ಹೊಂದಿದ್ದರು, ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ನೀಡುವ ಮೂಲಕ ಜನಮಾನಸದಲ್ಲಿ ಹಸಿರಾಗಿದ್ದಾರೆ ಎಂದರು.

ಜಯಣ್ಣ ಅವರ ಅಭಿಮಾನಿ ಭಾಗ್ಯ ಮಾತನಾಡಿ, ಜಯಣ್ಣ ಅವರ ಸಲಹೆಸೂಚನೆ ಪಡೆದವರು ಉತ್ತಮ ಮಾರ್ಗದಲ್ಲಿ ನಡೆದು, ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಮಾಡುತ್ತಿದ್ದಾರೆ. ಅವರ ಗುಣಕ್ಕೆ ಮಾರುಹೋಗದವರಿಲ್ಲ ಎಂದರು. ಜಿಲ್ಲಾ ಕಾಂಗ್ರೆಸ್ ಮಹಿಳಾಘಟಕದ ಅಧ್ಯಕ್ಷೆ ಲತಾರಾಜಶೇಖರ್, ಕೂಡ್ಲೂರು ಶ್ರೀಧರ್‌ಮೂರ್ತಿ, ಕೆ.ಎಂ.ನಾಗರಾಜು ಇತರರು ಮಾತನಾಡಿದರು.

ಇದೇವೇಳೆ ಮಾಜಿಸಚಿವರು, ಮಾಜಿರಾಜ್ಯಪಾಲರು ಆಗಿದ್ದ ಬಿ.ರಾಚಯ್ಯ ಅವರ ಧರ್ಮಪತ್ನಿ ಗೌರಮ್ಮ ರಾಚಯ್ಯ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಮುಖಂಡರಾದ ಪಿ.ಸಂಘಸೇನಾ, ಜಿ.ಪಂ ಮಾಜಿಸದಸ್ಯ ನಾಗರಾಜ್(ಕಮಲ್), ಜಿಎನ್‌ಎನ್ ಪುತ್ರ ಲೋಕೇಶ್, ನಗರಸಭೆ ಸದಸ್ಯೆ ಚಿನ್ನಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ನಾಗಶ್ರೀ, ಶಂಕರ ಸಿ.ಅಂಕನಶೆಟ್ಟಿಪುರ, ಎಸ್.ಜಯಣ್ಣ ಅಭಿಮಾನಿಗಳ ಬಳಗದ ಅಧ್ಯಕ್ಷ ಡಾ.ವಿ.ಎನ್.ಮಹದೇವಯ್ಯ ಹಾಗೂ

ಪದಾಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net