ಎಸ್.ಕೆ.ಎಸ್. ಶಾಲೆಗೆ ಚಾಂಪಿಯನ್ ಪಟ್ಟ

29ss1 kodlipete sks spots team
Published on

ಶನಿವಾರಸಂತೆ: ಕೊಡ್ಲಿಪೇಟೆಯಲ್ಲಿ ನಡೆಯುತ್ತಿರುವ ವಲಯ ಮಟ್ಟದ 17ರ ವಯಸ್ಸಿನ ವಿಭಾಗದ ಕ್ರೀಡಾಕೂಟದಲ್ಲಿ ಕೊಡ್ಲಿಪೇಟೆ ಕಲ್ಲುಮಟ್ಟದ ಎಸ್.ಕೆ.ಎಸ್. ಆಂಗ್ಲ ಮಾಧ್ಯಮ ಶಾಲೆಯ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದು, ಬಾಲಕಿಯರ ವಿಭಾಗದ ಕಬಡ್ಡಿ, ಖೋಖೋ ಮತ್ತು ಥ್ರೋಬಾಲ್‌ನಲ್ಲಿ ಪಂದ್ಯಗಳಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅದೇ ರೀತಿ ಬಾಲಕರ ವಿಭಾಗದ ಅಥ್ಲೆಟಿಕ್ ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಮೂಲಕ ವಲಯ ಮಟ್ಟದ ಚಾಂಪಿಯನ್ ಪಟ್ಟವನ್ನು ಪಡೆದುಕೊಂಡಿದ್ದಾರೆ ಎಂದು ವಿದ್ಯಾಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net