ಎಸ್ ಎಸ್ ಎಲ್ ಸಿ: ಟಾಪ್ ನಲ್ಲಿ ಬಂದ ಐಶ್ವರ್ಯ

1652951101438
Published on

ವಿಜಯಪುರ: ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿಜಯಪುರದ ವಿದ್ಯಾರ್ಥಿನಿ ಐಶ್ವರ್ಯ ಲಕ್ಷ್ಮಣ ಕನಸೆ 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ಟಾಪ್ ಟೆನ್ ನಲ್ಲಿ ಸ್ಥಾನ ಗಿಟ್ಟಿಸಿದ್ದಾಳೆ. ಎಸ್ ಎಸ್ ಎಲ್ ಸಿ ಟಾಪರ್ ಐಶ್ವರ್ಯ ಕನಸೆ ವಿಜಯವಾಣಿಯೊಂದಿಗೆ ಎಕ್ಸಕ್ಲೂಸಿವ್ ಆಗಿ ಮಾತನಾಡಿದ್ದಾಳೆ. ವಿಜಯವಾಣಿ ಯೊಂದಿಗೆ ಸಂಭ್ರಮ ಹಂಚಿಕೊಂಡ ಐಶ್ವರ್ಯ ಕನಸೆ, ದಿನಕ್ಕೆ 7ರಿಂದ 8ಗಂಟೆ ಓದಿದ್ದು ಸಾರ್ಥಕವಾಯ್ತು ಎಂದಿದ್ದಾಳೆ. ಶಾಲೆಯಲ್ಲಿ ಗ್ರೂಪ್ ಸ್ಟಡಿ ಮಾಡ್ತಿದ್ವಿ, ಟಾಪ್ ಒನ್ ನಲ್ಲಿ ಬರ್ತಿನಿ ಅಂತ ನಂಬಿಕೆ ಇಟ್ಟಿದ್ದೆ ಇಂದು ಅದು ನೆರವೇರಿದೆ ಎಂದಿದ್ದಾಳೆ. ಇನ್ನು ಐಶ್ವರ್ಯ ತಂದೆ ಲಕ್ಷ್ಮಣ ಸರಕಾರಿ ಶಾಲೆ ಶಿಕ್ಷರಾಗಿದ್ದಾರೆ. ತಾಯಿ ಸರಸ್ವತಿ ಮನೆಯಲ್ಲಿದ್ದು ಮಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ತಂದೆ-ತಾಯಿ ಆಶೀರ್ವಾದ ನನ್ನ ಮೇಲಿದೆ, ಜೊತೆಗೆ ನಾವು ಗಾಬರಿಗೊಳಾಗದೆ ಧೈರ್ಯದಿಂದ ಪರೀಕ್ಷೆ ಎದುರಿದ್ದೇ ಟಾಪ್ ಬರಲು ಕಾರಣ ಎಂದು ಐಶ್ವರ್ಯ ತಿಳಿಸಿದ್ದಾಳೆ. ಬಬಲೇಶ್ವರ ತಾಲೂಕಿನ ಕಾರಜೋಳದಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಓದಿರುವ ಐಶ್ವರ್ಯ ತನ್ನ ಶಾಲೆಯ ಎಲ್ಲ ಶಿಕ್ಷಕ ವರ್ಗವನ್ನು ಹಾಗೂ ಸಹಪಾಠಿಗಳನ್ನು ನೆನೆಸಿಕೊಂಡ್ರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net