

ಬೀದರ್: ಸಹಕಾರ ಧುರೀಣ ದಿ. ಡಾ.ಗುರುಪಾದಪ್ಪ ನಾಗಮಾರಪಳ್ಳಿ ಅವರು 25 ವರ್ಷ ಹಿಂದೆ ರಚಿಸಿದ್ದ ಸ್ವಸಹಾಯ ಸಂಘ(ಎಸ್ ಎಚ್ ಜಿ) ಪರಿಕಲ್ಪನೆ ಪ್ರಧಾನಿ ನರೇಂದ್ರ ಮೋದಿ ಅವರ ಈಗಿನ ಆತ್ಮನಿರ್ಭರ್ ಯೋಜನೆ ಅಂಶವೇ ಒಳಗೊಂಡಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ವ್ಯಾಖ್ಯಾನಿಸಿದ್ದಾರೆ.
ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಹಾಗೂ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ನಾಗರಿಕರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದೇ ಆತ್ಮನಿರ್ಭರ್ ಧ್ಯೇಯವಾಗಿದೆ. 1996ರಲ್ಲಿ ನಾಗಮಾರಪಳ್ಳಿ ಅವರು ಎಸ್ ಎಚ್ ಜಿ ರಚಿಸಿ ಮಹಿಳಾ ಸ್ವಾವಲಂಬನೆಗೆ ಭದ್ರ ಬುನಾದಿ ಹಾಕಿದ್ದರು. ಅವರ ಪರಿಕಲ್ಪನೆ ಇಂದು ಬೀದರ್ ಗೆ ವಿಶ್ವದಲ್ಲೇ ಹೆಸರು ತಂದುಕೊಟ್ಟಿದೆ ಎಂದು ಹೆಮ್ಮೆಪಟ್ಟರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹ್ಮದ್ ಸಲಿಮೊದ್ದೀನ್, ಮಾಂಜ್ರಾ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ ಮಾತನಾಡಿ, ಡಿಸಿಸಿ ಬ್ಯಾಂಕ್ ಬಹುಮುಖಿ ಸೇವೆ ಹಾಗೂ ನಾಗಮಾರಪಳ್ಳಿ ಅವರ ಸೇವೆ ಶ್ಲಾಘಿಸಿದರು. ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷ ಪರಮೇಶ್ವರ ಮುಗಟೆ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಗುರುರಾಜ ಕುಲಕರ್ಣಿ, ಶಶಿಕಾಂತ ಬಂಬಳಗೆ ಅವರನ್ನು ಸನ್ಮಾನಿಸಲಾಯಿತು.
ಸಹಕಾರ ಸಂಘಗಳ ಸಹಾಯಕ ನಿಬಂಧಕ ಸಂಗಮ ಭೀಮರಾವ ಹೈಬತ್ತಿ, ಡಿಸಿಸಿ ಬ್ಯಾಂಕ್ ಸಿಇಒ ಮಲ್ಲಿಕಾರ್ಜುನ ಮಹಾಜನ, ಜಿಎಂ ವಿಠ್ಠಲರೆಡ್ಡಿ ಎಡಮಲ್ಲೆ, ಚನ್ನಬಸಯ್ಯಾ ಸ್ವಾಮಿ, ಪ್ರಮುಖರಾದ ಬಸವರಾಜ ಹೆಬ್ಬಾಳೆ, ಶಿವಶರಣಪ್ಪ ತಗಾರೆ, ಡಾ. ಇದ್ರಿಸ್ ಅಹ್ಮದ್ ಖಾದ್ರಿ ಬಗದಲ್ ಇತರರಿದ್ದರು.ಬಸವರಾಜ ಕಲ್ಯಾಣಿ ನಿರೂಪಣೆ ಮಾಡಿದರು. ಉಮಾದೇವಿ ವಂದಿಸಿದರು. ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಡಿಸಿಸಿ ಬ್ಯಾಂಕ್, ಸಹಕಾರ ಮಾರಾಟ ಮಂಡಳ, ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಹಾಗೂ ಸಹಕಾರ ಇಲಾಖೆಯಿಂದ ಕಾರ್ಯಕ್ರಮ ಸಂಘಟಿಸಲಾಗಿತ್ತು.
ಜಿಲ್ಲೆಯ 171 ಪಿಕೆಪಿಎಸ್ ಮೂಲಕ 1.60 ಲಕ್ಷ ರೈತರಿಗೆ 857 ಕೋಟಿ ರೂ.ಸಾಲ ಶೂನ್ಯ ಬಡ್ಡಿಯಲ್ಲಿ ನೀಡುವ ಗುರಿ ಡಿಸಿಸಿ ಬ್ಯಾಂಕ್ ಹೊಂದಿದೆ. ಡಾ. ಗುರುಪಾದಪ್ಪ ನಾಗಮಾರಪಳ್ಳಿ ಅವರು ಕಟ್ಟಿ ಬೆಳೆಸಿದ ಬ್ಯಾಂಕ್‌ಗೆ ಹೆಮ್ಮರವಾಗಿ ಬೆಳೆಸುವ ಕನಸಿದೆ. ಅಧಿಕಾರ, ಆಸ್ತಿಯ ಆಸೆ ನನಗಿಲ್ಲ. ನಿರಾಶಾವಾದಿಯೂ ನಾನಲ್ಲ. ಅವಕಾಶ ಸಿಕ್ಕರೆ ಯಾವ ಸೇವೆಗೂ ಸಿದ್ಧನಿರುವೆ.| ಉಮಾಕಾಂತ ನಾಗಮಾರಪಳ್ಳಿಡಿಸಿಸಿ ಬ್ಯಾಂಕ್ ಅಧ್ಯಕ