ಎಸ್.ಎಂ.ಕೆ. ಬಡಾವಣೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಎಸ್.ಎಂ.ಕೆ. ಬಡಾವಣೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
Published on

ಹಾಸನ: ಪ್ರಸ್ತುತ ಪರಿಸ್ಥಿತಿಯಲ್ಲಿ ಸಮಾಜದಲ್ಲಿ ರಕ್ತದಾನದ ಮಹತ್ವ ತಿಳಿಸುವುದು ಅಗತ್ಯವಾಗಿದೆ ಎಂದು ಯೋಗ ಗುರು ಚೇತನ್ ಗುರೂಜಿ ಹೇಳಿದರು.
ನಗರದ ಅರಸೀಕೆರೆ ರಸ್ತೆಯ ಎಸ್.ಎಂ.ಕೆ. ಬಡಾವಣೆಯಲ್ಲಿ ಸ್ಥಳೀಯ ನಿವಾಸಿಗಳು ಹಾಗೂ ರೋಟರಿ ಸನ್ ರೈಸ್ ವತಿಯಿಂದ ಶನಿವಾರ ಆಯೋಜಿಸಿದ್ದ ಯೋಗ ಶಿಬಿರದ ಮುಕ್ತಾಯ ಸಮಾರಂಭ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಮಾತನಾಡಿದ ಅವರು, ಆರೋಗ್ಯ ಕ್ಷೇತ್ರದಲ್ಲಿ ಅಗಾಧವಾದ ಬದಲಾವಣೆಗಳಾಗಿದ್ದರೂ ಸಾಕಷ್ಟು ಮಂದಿಯಲ್ಲಿ ರಕ್ತದಾನ ಕುರಿತು ಇನ್ನೂ ಸಹ ಮೂಢನಂಬಿಕೆ, ತಪ್ಪು ಕಲ್ಪನೆಗಳಿವೆ ಎಂದು ಅಭಿಪ್ರಾಯಪಟ್ಟರು.
ಸೆಸ್ಕ್ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ವಜ್ರ ಕುಮಾರ್ ಮಾತನಾಡಿ, ರಕ್ತದಾನಕ್ಕಿಂತ ಮಿಗಿಲಾದ ದಾನವಿಲ್ಲ. ನಿಯಮಿತವಾಗಿ ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯವನ್ನು ಕಾಯ್ದುಕೊಳ್ಳಲು ಸಹಕಾರಿ ಆಗಲಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಬಿ.ಆರ್ ಬೊಮ್ಮೇಗೌಡ ರಕ್ತದಾನ ಮಾಡಿ ಮಾತನಾಡಿ,ರಕ್ತದಾನದಿಂದ ಸಮಾಜದ ಸ್ವಾಸ್ಥ್ಯ ಕಾಪಾಡಬಹುದಲ್ಲದೆ ನಮ್ಮ ವೈಯಕ್ತಿಕವಾಗಿ ಆರೋಗ್ಯದ ವಿಷಯದಲ್ಲಿ ಲಾಭವಿದೆ ಹಾಗಾಗೀ ರಕ್ತದಾನ ಮಾಡಲು ಅರ್ಹರಿರುವವರು ನಿಯಮಿತವಾಗಿ ರಕ್ತದಾನ ಅಗತ್ಯ ಮಾಡಿ ಜೀವ ಉಳಿಸಿ ಎಂದರು.
ಜೀವ ರಕ್ಷಾ ರಕ್ತ ಕೇಂದ್ರದ ವ್ಯವಸ್ಥಾಪಕ ಮೋಹನ್ ಮಾತನಾಡಿ, ಕೆಲ ವರ್ಷಗಳ ಹಿಂದೆ ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆ ಇನ್ನಿತರೆ ಅನೇಕ ತುರ್ತು ಸಂದರ್ಭಗಳಲ್ಲಿ ರಕ್ತದ ಅಲಭ್ಯತೆಯಿಂದಲೇ ಸಾಕಷ್ಟು ಮಂದಿ ಮೃತಪಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ರಕ್ತ ಲಭ್ಯವಾಗುತ್ತಿದ್ದು,ಯುವ ಜನತೆಯಲ್ಲಿ ರಕ್ತದಾನದ ಮಹತ್ವ ಮತ್ತಷ್ಟು ಮೂಡಿಸಬೇಕಿದೆ ಎಂದರು.
ಈ ವೇಳೆ ಶಿಕ್ಷಕ ಸೋಮಶೇಖರ್,ವಸಂತ್ ಕುಮಾರ್,ಕರುಣೇಶ್,ಕುಮಾರಸ್ವಾಮಿ,ಲೋಕೇಶ್,ಬೋರೇಗೌಡ,ದೇವರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net