ಎಸ್.ಆರ್.ಪಾಟೀಲ ಆಧುನಿಕ ಶ್ರವಣ ಕುಮಾರ.

bkt-31-1
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದಲ್ಲಿ ಬುಧವಾರ ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಎಸ್.ಆರ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ ಅವರನ್ನು ಎರೆಹೊಸಳ್ಳಿಯ ಮಹಾಯೋಗಿ ವೇಮನ ಸಂಸ್ಥಾನ ಮಠದ ವೇಮನಾನಂದ ಸ್ವಾಮೀಜಿ, ಶಿರಹಟ್ಟಿಯ ಫಕೀರೇಶ್ವರ ದಿಂಗಾಲೇಶ್ವರ ಮಠದ ಜಗದ್ಗುರು ಫಕೀರದಿಂಗಾಲೇಶ್ವರ ಸ್ವಾಮೀಜಿ ಸನ್ಮಾನಿಸಿ ಆರ್ಶೀದಿಸಿದರು.
Published on

ಬಾಗಲಕೋಟೆ: ಅಧಿಕಾರ ಇದ್ದಾಗ ಸಂಘ, ಸಂಸ್ಥೆ ಕಟ್ಟಿ ಬೆಳೆಸುತ್ತಾರೆ. ಆದರೇ ಎಸ್.ಆರ್.ಪಾಟೀಲ ವಿಭಿನ್ನ ವಿನೂತನ ರಾಜಕಾರಣಿ. ಅಽಕಾರ ಇಲ್ಲದೇ ಇದ್ದಾಗ ತೃಪ್ತಿ ಕಾಣುವ ಸಂಸ್ಥೆ ಸ್ಥಾಪಿಸಿದ್ದಾರೆ. ಸಜ್ಜನರು ಕಾಣ ಸಿಗುವದಿಲ್ಲ. ತಂದೆ, ತಾಯಿಗೋಸ್ಕರ ಹೆತ್ತವರ ಮಂದಿರ ಸ್ಥಾಪಿಸಿದ ಆಧುನಿಕ ಶ್ರವಣಕುಮಾರ ಎಸ್.ಆರ್.ಪಾಟೀಲ ಹೇಳಿದರು.

ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದಲ್ಲಿ ಬುಧವಾರ ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಎಸ್.ಆರ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಂದೆ ಆಗುತ್ತದೆ ಇಲ್ಲವೋ ಗೊತ್ತಿಲ್ಲ. ಗ್ರಾಮೀಣ ಜನರ ಬದುಕು ಉದ್ಧರಿಸಲು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಮೆಡಿಕಲ್ ಕಾಲೇಜು ನಡೆಸುವುದು ಸುಲಭದ ಕೆಲಸವಲ್ಲ. ಪ್ರತಿ ತಿಂಗಳು ಕನಿಷ್ಠ ವೈದ್ಯರು ಹಾಗೂ ಸಿಬ್ಬಂದಿಗೆ ಎರಡು ಕೋಟಿ ರೂ. ಸಂಬಳ ನೀಡಬೇಕು. ಇಂತಹ ಕಠಿಣ ಸವಾಲ್ ಸ್ವೀಕರಿಸುವ ಕೆಲಸ ಮಾಡಿದ್ದಾರೆ. ಬಿಲ್ ನೋಡಿದರೇ ಆಸ್ಪತ್ರೆಗೆ ಹೋಗಬಾರದು ಎನ್ನುವ ಸ್ಥಿತಿ ಇರುವಾಗ ಬಡವರಿಗಾಗಿ ಆಸ್ಪತ್ರೆ ಆರಂಭಿಸಿ ಎಸ್.ಆರ್.ಪಾಟೀಲ ಜನರ ದಿಲ್ ಗೆದ್ದಿದ್ದಾರೆ. ಈ ಸಂಸ್ಥೆ ಬೆಳವಣಿಗೆಗೆ ನಾನು ಸದಾ ಇರುತ್ತೇನೆ. ಪ್ರತಿ ವರ್ಷ ರಕ್ತದಾನ ಶಿಬಿರ ನಡೆಸಿ ಆಸ್ಪತ್ರೆ ಹಾಗೂ ಸಂಶೋಧನೆಗೆ ೧ ಕ್ವಿಂಟಲ್ ರಕ್ತ ನೀಡುತ್ತೇನೆ ಎಂದು ಘೋಷಣೆ ಮಾಡಿದರು.

ಎರೆಹೊಸಳ್ಳಿಯ ವೇಮಾನಂದ ಸ್ವಾಮೀಜಿ, ಸಚಿವರಾದ ಡಾ.ಜಿ ಪರಮೇಶ್ವರ, ಡಾ.ಶರಣಪ್ರಕಾಶ ಪಾಟೀಲ, ದಿನೇಶ ಗುಂಡೂರಾವ, ಆರ್.ಬಿ.ತಿಮ್ಮಾಪೂರ, ಶಾಸಕ ಸಿದ್ದು ಸವದಿ, ವಿ.ಪ ಸದಸ್ಯ ಹಣಮಂತ ನಿರಾಣಿ, ಬಾಗಲಕೋಟೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ಡಾ.ಎಂ.ಕೆ.ರಮೇಶಕುಮಾರ, ಡಾ.ನವೀನ ಎಸ್, ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಪಾಟೀಲ, ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎಲ್.ಬಿ.ಕುರ್ತಕೋಟಿ, ಬಾಪೂಜಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಸಿ.ಮೋಟಗಿ, ದಯಾನಂದ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net