ಎಸಿ ಅಧಿಕಾರ ಸ್ವೀಕಾರ

Ac authorization
ಅಬೀದ್ ಗದ್ಯಾಳ
Published on

ಇಂಡಿ: ಸ್ಥಳೀಯ ಕಂದಾಯ ಉಪವಿಭಾಗಾಧಿಕಾರಿಯಾಗಿ ಅಬೀದ್ ಗದ್ಯಾಳ ಅಧಿಕಾರ ಸ್ವೀಕರಿಸಿದ್ದಾರೆ.

ಮೂಲತಃ ರಬಕವಿಯ ಅಬೀದ್‌ರವರು, ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆ ರಬಕವಿಯಲ್ಲಿ, ಇಂಡಿ ತಾಲೂಕಿನ ಲಚ್ಯಾಣದಲ್ಲಿ ಟಿಸಿಎಚ್, ಧಾರವಾಡದಲ್ಲಿ ಪದವಿ ಪಡೆದಿದ್ದಾರೆ. 2014ರಲ್ಲಿ ಕೆಎಎಸ್ ಪಾಸಾಗಿದ್ದಾರೆ. ಅವರು ಮಡಕೇರಿಯಲ್ಲಿ ಪರೀಕ್ಷಾರ್ಥ ಅಧಿಕಾರಿಯಾಗಿ, ಜಮಖಂಡಿ ಮತ್ತು ಬ್ಯಾಡಗಿಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಯಾಗಿ, ರಾಣೆಬೆನ್ನೂರ, ಬಾಗಲಕೋಟದಲ್ಲಿ ಭೂ ಸ್ವಾಧೀನ ಅಧಿಕಾರಿಯಾಗಿ, ಮಂಗಳೂರನಲ್ಲಿ ಜಿಲ್ಲಾ ನಗರಾಭಿವೃದ್ಧಿಕೋಶದ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಗುರುವಾರ ಇಂಡಿಯ ಕಂದಾಯ ಉಪವಿಭಾಗಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net