

ಮದ್ದೂರು: ತಾಲೂಕಿನ ಸೊಳ್ಳೆಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕಾಂಗ್ರೆಸ್ ಬೆಂಬಲಿತರಾದ ಎಸ್.ಟಿ.ಪ್ರಕಾಶ್ ಗೌಡ ಅಧ್ಯಕ್ಷರಾಗಿ, ಶೋಭಾ ಸಿ.ರಾಮಣ್ಣ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಇಬ್ಬರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಇವರ ಆಯ್ಕೆಯನ್ನು ಚುನಾವಣಾಧಿಕಾರಿ ಧರಣೇಂದ್ರ ಕುಮಾರ್ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಎಸ್.ಟಿ.ಪ್ರಕಾಶ್ ಗೌಡ ಮಾತನಾಡಿ, ನನ್ನ ಅಧಿಕಾರದ ಅವಧಿಯಲ್ಲಿ ಸಂಘದ ಶ್ರೇಯೋಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುತ್ತೇನೆ. ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಶಾಸಕ ಕೆ.ಎಂ.ಉದಯ್ ಅವರ ಮಾರ್ಗದರ್ಶನದಲ್ಲಿ ಸಹಕಾರ ಸಂಘದ ಅಭಿವೃದ್ಧಿ ಜತೆಗೆ ಹಾಲು ಉತ್ಪಾದಕರಿಗೆ ಒಕ್ಕೂಟದಿಂದ ಸಿಗುವ ಹಲವು ಯೋಜನೆಗಳನ್ನು ತಲುಪಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಸಂಘದ ನಿರ್ದೇಶಕರಾದ ಪುಟ್ಟಸ್ವಾಮಿ, ಎಸ್.ದಯಾನಂದ, ಕೃಷ್ಣ, ಶಶಿಕುಮಾರ್, ವೆಂಕಟೇಶ್, ಶಿವರಾಮ, ಎಸ್.ಕೆ.ದಿವ್ಯಾ, ನಾರಾಯಣ್, ಮುಖಂಡರಾದ ಬಿ.ಶಂಕರೇಗೌಡ, ಇ.ಚಿನ್ನಪ್ಪ, ಪುಟ್ಟರಾಜು, ಎಸ್.ಸಿ.ರಮೇಶ್, ಎಸ್.ಡಿ.ವೆಂಕಟೇಶ್, ರಾಮಚಂದ್ರ, ಎಸ್.ಟಿ.ಗುರು ಇದ್ದರು.