ಎಳ್ಳು ಅಮವಾಸ್ಸೆಯಂದು ಚೆರಗ ಚೆಲ್ಲಿ ಸಂಭ್ರಮ

1671787164163
Published on

ವಿಜಯಪುರ: ನಾಡಿನ ಪ್ರಮುಖ ಹಬ್ಬ ಹಾಗೂ ರೈತನ ಸಂತಸದ ಸಮಯವನ್ನು ಎಳ್ಳು ಅಮವಾಸ್ಸೆಯಾಗಿ ಆಚರಿಸಲಾಗುತ್ತದೆ. ವಿಜಯಪುರ ಜಿಲ್ಲೆಯಲ್ಲಿ ಎಲ್ಲೆಡೆ ಎಳ್ಳು ಅಮವಾಸ್ಸೆಯ ಹಬ್ಬವನ್ನು ಚೆರಗ ಚಲ್ಲುವ ಮೂಲಕ ಆಚರಿಸಲಾಯಿತು. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಯುವತಿಯರು, ಯುವಕರು ಹಾಗೂ ಮಹಿಳೆಯರು ಸಂಭ್ರಮದಿಂದ ಚರಗ ಚೆಲ್ಲಿದರು. ಸಜ್ಜಿರೊಟ್ಟಿ, ಶೇಂಗಾ ಹೋಳಿಗೆ, ಕಡಲೆಬೇಳೆ ಹೋಳಿಗೆ, ಬದನೆಕಾಯಿ ಪಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಖ್ಯಾದ್ಯವನ್ನು ತಯಾರಿಸಿ ಜಮೀನಿಗೆ ತೆರಳಿ ಭರ್ಜರಿಯಾಗಿ ಊಟ ಸವಿದರು. ಇದಕ್ಕೂ ಮೊದಲು ಮನೆಯಿಂದ ತಂದಿದ್ದ ಅಡುಗೆಯನ್ನು ಜಮೀನಿನಲ್ಲಿ ಬನ್ನಿ ಮರಕ್ಕೆ ಪೂಜಿಸಲಾಯಿತು. ಅಲ್ಲದೆ ಸಜ್ಜಿರೊಟ್ಟಿ ಚವಳಿಕಾಯಿ ಚೋಂಗಿಬೋಲೊ‌ ಎಂದು ತಾವು ಬೆಳೆದ ಜೋಳದ ಬೆಳೆಗೆಲ್ಲ ನೈವೇದ್ಯ ಅರ್ಪಿಸಲಾಯಿತು. ವಿನೋದ ಭೈರಶೆಟ್ಟಿ, ಭುವನೇಶ್ವರಿ ಭೈರಶೆಟ್ಟಿ, ಕಾವ್ಯಶ್ರೀ ಭೈರಶೆಟ್ಟಿ, ಐಶ್ವರ್ಯ ಭೈರಶೆಟ್ಟಿ ಸೇರಿದಂತೆ ಇತರರು ಚರಗ ಚೆಲ್ಲುವ ಮೂಲಕ ಎಳ್ಳು ಅಮವಾಸ್ಸೆ ಆಚರಿಸಿ ಸಂಭ್ರಮಿಸಿದ್ರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net