ಎಲ್​ಐಸಿ ಬೋನಸ್ ಹೆಚ್ಚಳಕ್ಕೆ ಆಗ್ರಹ

23Koppa01 web
Published on

ಕೊಪ್ಪ: ವಿಮಾ ಪಾಲಿಸಿದಾರರಿಗೆ ಬೋನಸ್ ಹೆಚ್ಚಳ ಮಾಡಬೇಕು. ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯ ಒದಗಿಸಬೇಕು. ವಿಮಾ ಪ್ರತಿನಿಧಿಗಳಿಗೆ ಅಧಿಕ ಕಮಿಷನ್, ಪ್ರತಿನಿಧಿಗಳಿಗೆ ಕ್ಷೇಮನಿಧಿ ಮತ್ತು ಮಕ್ಕಳ ಶಿಕ್ಷಣಕ್ಕಾಗಿ ಸಾಲ ಸೌಲಭ್ಯ ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಎಲ್​ಐಸಿ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಸಿದ್ದಪ್ಪ ಗೌಡ ಒತ್ತಾಯಿಸಿದರು. ಪಟ್ಟಣದ ಎಲ್​ಐಸಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಎಲ್​ಐಸಿ ಆಡಳಿತ ಮಂಡಳಿ ಮನವಿ ತಿರಸ್ಕರಿಸಿದೆ. ಆದ್ದರಿಂದ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಆಡಳಿತ ಮಂಡಳಿ ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರತಿ ಶುಕ್ರವಾರ ಕಚೇರಿ ಎದುರು ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net