ಎಲ್ಲೆಲ್ಲೂ ಸ್ವಾರ್ಥ ವಿಜೃಂಭಿಸುತ್ತದೆ,ಸಂಸದರ ಕಳವಳ

ctd kolalu
Published on

ಚಿತ್ರದುರ್ಗ: ಇಡೀ ಜೀವಸಂಕುಲದೆಡೆ ಕಾಳಜಿ,ಮಮತೆ,ವಾತ್ಸಲ್ಯ ಭಾವ ಬೆಳಸಿಕೊಂಡವರು ಮಾನವತೆಯಿಂದ ದೈವತ್ವದೆಡೆ ಸಾಗುತ್ತಾರೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು. ಹೊಳಲ್ಕೆರೆ ತಾಲೂಕು ಕೊಳಾಳು ಶ್ರೀ ಕೆಂಚಾವಧೂತ ಮಠದಲ್ಲಿ ಗ್ರಾಮಸ್ಥರು ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಎಲ್ಲೆಡೆ ಸ್ವಾರ್ಥ ಭಾವನೆ ವಿಜೃಂಭಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ನಾನು ನನ್ನದು,ಕುಟುಂಬ ಎಂಬ ವ್ಯಾಮೋಹ ತುಂಬಿಕೊಂಡಿದೆ. ಇದರ ಹೊರತಾಗಿ ನಮ್ಮವರು,ಪರರ ಎನ್ನದೇ ಎಲ್ಲರ ಒಳಿತನ್ನು ಬಯಸಿದರೆ ಮನುಷ್ಯನೂ ದೈವ ಸ್ವರೂಪಿಯಾಗಿ ಪೂಜಿತನಾಗುತ್ತಾನೆ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ಅವರು ಮಾತನಾಡಿ,ಸಜ್ಜನತೆಗೆ ಸಾಕ್ಷಿಯಾದ,ಮುತ್ಸದಿ ಗೋವಿಂದ ಕಾರಜೋಳ ಅವರನ್ನು ಗೆಲ್ಲಿಸುವ ಮೂಲಕ ಪಕ್ಷಕ್ಕೆ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಬೆಂಬಲ ಜನರು ಬೆಂಬಲ ನೀಡಿದ್ದಾರೆ. ಜಿಲ್ಲೆ ಜ್ವಲಂತ ಸಮಸ್ಯೆಗಳು ಒಂದೊಂದಾಗಿ ಪರಿಹಾರ ಆಗುವ ಕಾಲ ಸನ್ನಿಹಿತವಾಗಿದೆ ಎಂದರು.
ನಿವೃತ್ತ ಪ್ರಾಚಾರ್ಯ ಕೆಂಚಪ್ಪ ಅವರು ಮಾತನಾಡಿ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ರಸ್ತೆ ಹಾಗೂ ಮೂಲ ಸೌಲಭ್ಯಗಳನ್ನು ಒದಗಿಸು ವಂತೆ ಸಂಸದರಿಗೆ ಮನವಿ ಮಾಡಿದರು. ಜಿಪಂ ಮಾಜಿ ಉಪಾಧ್ಯಕ್ಷ ದ್ಯಾಮಣ್ಣ,ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ,ಡಿ.ಒ. ಮುರಾರ್ಜಿ,ಗೋವಿಂದಪ್ಪ,ಕೆಂಚಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net