ಎಲ್ಲೆಡೆ ಮನೆ ಮಾಡಿದ ಯುಗಾದಿ ಖುಷಿ

3103KLB03
Published on

ಕಲಬುರಗಿ: ತೀವ್ರ ಬಿಸಿಲಿನ ಮಧ್ಯೆಯೂ ಜಿಲ್ಲೆಯಲ್ಲಿ ಹಿಂದುಗಳ ಹೊಸ ರ‍್ಷ ಯುಗಾದಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಶನಿವಾರ ಯುಗಾದಿ ಅಮಾವಾಸ್ಯೆ ಆಚರಿಸಿದ್ದು, ಭಾನುವಾರ ಸಂಭ್ರಮದಿಂದ ಯುಗಾದಿ ಹಬ್ಬವನ್ನು ಆಚರಿಸಿದರು.

ಶಾಲೆ, ಕಾಲೇಜುಗಳು ರಜೆಯಲ್ಲಿದ್ದು, ಮಕ್ಕಳೊಂದಿಗೆ ಹಬ್ಬದಾಚರಣೆಗೆ ಮಾರುಕಟ್ಟೆಯಲ್ಲಿ ಜೋರು ಖರೀದಿ ನಡೆದಿದ್ದು, ಹೊಸ ಬಟ್ಟೆ ತೊಟ್ಟು, ಮನೆಗೆ ತಳ್ಳೀರು ತೋರಣಕ್ಕೆ ಮಾವಿನ ಎಲೆ, ಹೂವುಗಳಿಂದ ಅಲಂಕರಿಸಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಅಭಿಷೇಕ, ರುದ್ರಾಭಿಷೇಕ, ಅಲಂಕಾರ ನೆರವೇರಿಸಲಾಯಿತು. ಸೋಮವಾರ ಯುಗಾದಿ ಹಬ್ಬದಾಚರಣೆ ನಡೆದಿದ್ದು, ಬೆಳಗ್ಗೆಯಿಂದಲೇ ವಿಶೇಷ ಅಭ್ಯಂಜನ ಮಾಡಿ, ದೇವರಿಗೆ ಪೂಜೆ, ನೈವೇದ್ಯ ರ‍್ಪಿಸಿ ಬೇಂವ್​ ಮಾಡಿ ಸೇವಿಸಲಾಯಿತು. ಬಹುತೇಕರ ಮನೆಯಲ್ಲಿ ಯುಗಾದಿ ನಿಮಿತ್ತ ಹೊಸ ಪಂಚಾಗಕ್ಕೆ ಪೂಜೆ ಮಾಡಿ, ಪಂಚಾಗ ಓದಲಾಯಿತು.

ಯುಗಾದಿ ಬೇಂವ್​ ಸವಿ: ಕಲಬುರಗಿ ಜಿಲ್ಲೆಯಲ್ಲಿ ಯುಗಾದಿ ನಿಮಿತ್ತ ವಿಶೇಷವಾಗಿ ಬೇಂವ್​ ಪಾನಕ ಸಿದ್ಧಪಡಿಸಿ ಸೇವಿಸುವುದು ವಾಡಿಕೆ. ಬೇವಿನ ಹೂವಿನ ಪಕಳೆಗಳು, ಬೆಲ್ಲ, ಕೊಬ್ಬರಿ, ಮಾವಿನಕಾಯಿ, ಕಲ್ಲು ಸಕ್ಕರೆ, ಒಣದ್ರಾಕ್ಷಿ, ದ್ರಾಕ್ಷಿ ಸೇರಿ ಇತರ ಪದರ‍್ಥಗಳನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಹೊಸದಾಗಿ ಖರೀದಿಸಿದ ಮಣ್ಣಿನ ಮಡಿಕೆಯಲ್ಲಿಟ್ಟು ಇಡೀ ದಿನ ಸೇವಿಸಿದರು. ಸ್ನೇಹಿತರು, ಆತ್ಮೀಯರನ್ನು ಆಹ್ವಾನಿಸಿ, ಬೇಂವ್​ ಸೇವಿಸಿ ಸಂಭ್ರಮಿಸಿದರು. ಬೇಂವ್​ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಸಹಕಾರಿಯಾಗಿದೆ.

ಯಾಳವಾರದಲ್ಲಿ ಲಗೋರಿ ಆಟ: ಜೇರ‍್ಗಿ ತಾಲೂಕಿನ ಯಾಳವಾರ ಗ್ರಾಮದಲ್ಲಿ ಯುಗಾದಿ ಹಬ್ಬದ ನಿಮಿತ್ತ ಭಾನುವಾರ ಪ್ರಭಾಕರ ಸಾಹು ಕಲಬುರಗಿ ಅವರ ಮನೆಯಲ್ಲಿ ಸಾಮೂಹಿಕವಾಗಿ ಬೇಂವ್​ ಸೇವಿಸಿ, ಮೆರವಣಿಗೆ ಮೂಲಕ ಗ್ರಾಮದೇವತೆ ದೇವಸ್ಥಾನದವರೆಗೆ ತೆರಳಿ, ಗ್ರಾಮದ ಮುಖಂಡರು, ಗಣ್ಯರು ಸೇರಿ ಗ್ರಾಮದೇವತೆಯ ದೇವಸ್ಥಾನದ ಬಳಿ ಲಗೋರಿ ಆಡಿ, ಹಬ್ಬ ಆಚರಿಸಲಾಯಿತು. ಲಗೋರಿಗೆ ಚೆಂಡಿಗೆ ಪೂಜೆ ಸಲ್ಲಿಸಿ, ಆಡಿ ಸಂಭ್ರಮಿಸಿದರು. ಪ್ರಭಾಕರ ಸಾಹು ಕಲಬುರಗಿ, ಮುನ್​ಾ ಪಟೇಲ್​ ಮಾಲಿ ಪಾಟೀಲ್​, ಹಣಮಂತರಾವ ಕುಲ್ರ‍್ಣಿ, ದೇವಿಂದ್ರಪ್ಪ ಕಂದಗಲ್​, ಸಂತೋಷ ಪಡಶೆಟ್ಟಿ, ರಾಚಯ್ಯ ಸ್ವಾಮಿ, ಬುಡ್ಡಾ ಪಟೇಲ್​ ಪೊ.ಪಾಟೀಲ್​, ರ‍್ವತರೆಡ್ಡಿ ಅರಕೇರಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದು, ಪರಸ್ಪರ ಶುಭಾಶಯ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net